ಬೆಂಗಳೂರು ಡೆಸ್ಕ್:- ರಾಜ್ಯದಲ್ಲಿ ಸಂಪುಟ ಪುನರರ್ಚನೆ ಮಾಡುವಂತೆ ಕೋರಿ ಕಾಂಗ್ರೆಸ್ ಹೈಕಮಾಂಡ್ ಗೆ ಪ್ರಥಮವಾಗಿ ಪ್ರವೇಶ ಪಡೆದ ಶಾಸಕರು ಸೇರಿದಂತೆ 31 ಶಾಸಕರು ಪತ್ರ ಬರೆದಿದ್ದಾರೆ. ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಮಹತ್ವದ ಬೆಳವಣಿಗೆಯೊಂದರಲ್ಲಿ, ಸಚಿವ ಸಂಪುಟವನ್ನು ಕೂಡಲೇ ಪುನಾರಚನೆ ಮಾಡಬೇಕೆಂದು ಒತ್ತಾಯಿಸಿ ಶಾಸಕರು ಹೈಕಮಾಂಡ್ಗೆ ಪತ್ರ ಬರೆದಿದ್ದಾರೆ.
ಕಳೆದ ಕೆಲವು ದಿನಗಳಿಂದ ತೆರೆಮರೆಯಲ್ಲಿ ನಡೆಯುತ್ತಿದ್ದ ಸಚಿವ ಸ್ಥಾನದ ಆಕಾಂಕ್ಷಿಗಳ ಚಟುವಟಿಕೆ ಈಗ ಬಹಿರಂಗಗೊಂಡಿದೆ. ಪ್ರಸ್ತುತ ಇರುವ ಸಚಿವ ಸಂಪುಟದಲ್ಲಿ ಬದಲಾವಣೆ ತರಬೇಕು ಮತ್ತು ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂಬ ಬೇಡಿಕೆಯೊಂದಿಗೆ 31 ಶಾಸಕರು ಸಹಿ ಮಾಡಿರುವ ಪತ್ರವನ್ನು ಎಐಸಿಸಿ ನಾಯಕರಿಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಎರಡೂವರೆ ವರ್ಷಗಳ ನಂತರ ಸಂಪುಟ ಪುನಾರಚನೆ ಮಾಡಲಾಗುವುದು ಎಂಬ ಹಿಂದಿನ ಭರವಸೆಯನ್ನು ಈಡೇರಿಸಬೇಕು. ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡದ ಸಚಿವರನ್ನು ಕೈಬಿಟ್ಟು, ಉತ್ಸಾಹಿ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು. ಎಲ್ಲಾ ಜಿಲ್ಲೆಗಳಿಗೂ ಸಮಾನ ಪ್ರಾತಿನಿಧ್ಯ ಸಿಗುವಂತೆ ಸಂಪುಟ ಸರ್ಜರಿ ಮಾಡಬೇಕು ಎಂಬ ಬಲವಾದ ಕೋರಿಕೆ ಪತ್ರದಲ್ಲಿದೆ.
ಶಾಸಕ ಎಎಸ್ ಪೊನ್ನಣ್ಣ, ಭೀಮಸೇನ ಚಿಮ್ಮನಕಟ್ಟಿ, ಪ್ರದೀಪ್ ಈಶ್ವರ್, ಇಕ್ಬಾಲ್ ಹುಸೇನ್, ಎನ್.ಟಿ ಶ್ರೀನಿವಾಸ್, ಅಶೋಕ್ ಕುಮಾರ್ ರೈ, ಎನ್.ಶ್ರೀನಿವಾಸ್, ಧ್ರುವ ನಾರಾಯಣ್, ಶಿವಗಂಗಾ ಬಸವರಾಜು, ವಿಶ್ವಾಸ್ ವೈದ್ಯ, ನಾರಾ ಭರತ್ ರೆಡ್ಡಿ, ಪ್ರಕಾಶ್ ಕೋಳಿವಾಡ, ಕೆ.ಎಸ್ ಆನಂದ, ಮಂಥರ್ ಗೌಡ, ಚನ್ನಾರೆಡ್ಡಿ ಪಾಟೀಲ್, ದೇವೇಂದ್ರಪ್ಪ, ಡಿ.ರವಿಶಂಕರ್, ನಯನಾ ಮೋಟಪ್ಪ, ರಾಜಾವೇಣುಗೋಪಾಲ ನಾಯಕ, ಮಹೇಂದ್ರ ತಮ್ಮಣ್ಣನವರ್, ಎ.ಸಿ ಶ್ರೀನಿವಾಸ್, ಅಶೋಕ್ ಮನಗೂಳಿ, ಪಿ.ರವಿಕುಮಾರ್, ಬಾಬಾಸಾಹೇಬ್ ಪಾಟೀಲ್ ಸೇರಿದಂತೆ 31 ಶಾಸಕರ ಪತ್ರ ಬರೆದಿದ್ದಾರೆ.
Leave feedback about this