ಬೆಂಗಳೂರು:- ಹೆಬ್ಬಾಳ ಜಂಕ್ಷನ್ನಲ್ಲಿ ನಿರ್ಮಿಸಲಾದ ಮೇಲ್ಸೇತುವೆಯನ್ನು ಆಗಸ್ಟ್ 18ರಂದು ಉದ್ಘಾಟನೆ ಮಾಡಲಾಯಿತು. ಕೆ ಆರ್ ಪುರ ಕಡೆಯಿಂದ ಮೇಖ್ರಿ ವೃತ್ತದ ಕಡೆ ವಾಹನಗಳ ಸಂಚಾರಕ್ಕೆ ಈ ಮೇಲ್ಸೇತುವೆಯಿಂದ ಪ್ರಯೋಜನ ಆಗಲಿದೆ. ಆಗಸ್ಟ್ 18ರಂದು ಬೆಳಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹೆಬ್ಬಾಳ ಮೇಲ್ಸೇತುವೆ ಉದ್ಘಾಟನೆ ಮಾಡಿದರು.
ಈ ವೇಳೆ ನಟಿ ರಮ್ಯಾ ಸೇರಿ, ಕಾಂಗ್ರೆಸ್ನ ಪ್ರಮುಖರು ಅನೇಕರು ಪಾಲ್ಗೊಂಡಿದ್ದರು.
ಹೆಬ್ಬಾಳ ಫ್ಲೈಓವರ್ ಉದ್ಘಾಟನೆ ಮಾಡಿ, ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದು ಖುಷಿ ಪಡುವ ವಿಷಯವೇ ಆದರೂ ಈ ಕಾರ್ಯಕ್ರಮವು ವಿಪರೀತ ಟ್ರಾಫಿಕ್ ಜಾಮ್ಗೆ ಕಾರಣವಾಗಿ, ಜನಸಾಮಾನ್ಯರು ಶಪಿಸುವಂತೆ ಆಯಿತು. ಕಳೆದ ವಾರ ಲಾಂಗ್ ವೀಕೆಂಡ್ ಇತ್ತು. ಆಗಸ್ಟ್ 15, ಶನಿವಾರ-ಭಾನುವಾರದ ಬಳಿಕ ಆಗಸ್ಟ್ 18ರ ಸೋಮವಾರ ಬೆಳಗ್ಗೆ ಸಹಜವಾಗಿಯೇ ಬೆಂಗಳೂರಿನ ಎಲ್ಲ ರಸ್ತೆಗಳಲ್ಲೂ ಟ್ರಾಫಿಕ್ ಜಾಸ್ತಿ ಇತ್ತು. ಜನರು ತಾವು ಹೋಗಬೇಕಾದ ಜಾಗಕ್ಕೆ ಹೋಗಲು ಗಡಿಬಿಡಿಯಲ್ಲಿ ಇದ್ದರು. ಆದರೆ ಹೆಬ್ಬಾಳ ಮೇಲ್ಸೇತುವೆ ಉದ್ಘಾಟನೆ ಕಾರ್ಯಕ್ರಮದ ನಿಮಿತ್ತ ಆ ಭಾಗದ ಕೆಲವು ರಸ್ತೆಗಳಲ್ಲಿ ಸಂಚಾರ ನಿಷೇಧಿಸಲ್ಪಟ್ಟು, ವಿಪರೀತ ಟ್ರಾಫಿಕ್ ಆಯಿತು. ಇದರಿಂದ ಕೋಪಗೊಂಡ ಜನರು ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಹಾಕಿದ್ದಾರೆ. ಸಿಎಂ, ಡಿಸಿಎಂ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Leave feedback about this