ಬೆಂಗಳೂರು

ಸಂವಿಧಾನದ ಬಗ್ಗೆ ಗೊತ್ತಿಲ್ಲ ಅಂದರೆ ಅವನನ್ನು ಮೂರ್ಖ ಎಂದು ಕರೀಬೇಕಾ ಎಂದ ವ್ಯಂಗ್ಯವಾಡಿದ ಸಿಎಂ

ಬೆಂಗಳೂರು:- ಸಾಹಿತಿ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆಗೆ ವಿರೋಧ ವ್ಯಕ್ತಪಡಿಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ಸಿಎಂ ಸಿದ್ದರಾಮಯ್ಯ ಮೂರ್ಖ ಎಂದು ಹೇಳಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ‌ ಆಯೋಜಿಸಿದ್ದ ಸಮಾರಂಭ ಉದ್ಘಾಟಿಸಿದ ನಂತರ ಮಾಜಿ ಸಂಸದನಿಗೆ ಟಾಂಗ್ ನೀಡಿದ್ದಾರೆ.

ಸಿಎಂ ಮಾನಾಡಿ, ಧರ್ಮದ ಆಧಾರದ ಮೇಲೆ ರಾಜಕೀಯ ಮಾಡೋದು, ಸಾಹಿತಿ ಬಾನು ಮುಷ್ತಾಕ್ ಅವರು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಮಾಡಬಾರದು ಎನ್ನುವುದು. ಬೇರೆ ಧರ್ಮದವರು ಪೂಜೆ ಮಾಡಬಾರದು ಎನ್ನುವುದು ಅರ್ಥವಾಗದ ವಿಚಾರ ಎಂದ ಅವರು ಸಂವಿಧಾನದಲ್ಲೇ ಜಾತಿ, ಧರ್ಮ ಬಿಟ್ಟು ಸಮಾನತೆಯಲ್ಲಿ ಬಾಳಬೇಕೆಂಬುದು ಇದೆ. ಆದರೆ, ಒಬ್ಬ ಮಾಜಿ ಲೋಕಸಭಾ ಸದಸ್ಯನಿಗೆ ಸಂವಿಧಾನದ ಬಗ್ಗೆ ಗೊತ್ತಿಲ್ಲ ಅಂದರೆ ಅವನನ್ನು ಮೂರ್ಖ ಎಂದು ಕರೀಬೇಕಾ ಎಂದು ವ್ಯಂಗ್ಯವಾಡಿದ್ದಾರೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video