ಮಂಗಳೂರು:- ಧರ್ಮಸ್ಥಳದ ಸುತ್ತಾಮುತ್ತಾ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಸಂಬಂಧ ಸದ್ಯ ಶೋಧ ಕಾರ್ಯಾಚರಣೆಗೆ ತಾತ್ಕಲಿಕ ಬ್ರೇಕ್ ಹಾಕಲಾಗಿದೆ. ವಿಧಾನಸಭೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಈ ಸಂಬಂಧ ತಿಳಿಸಿದ್ದಾರೆ.
ಕಾರ್ಯಚರಣೆ ಸ್ಥಗಿತಗೊಂಡಿದ್ದರೂ ಧರ್ಮಸ್ಥಳದ ವಿವಿಧ ಉತ್ಖನನ ಸ್ಥಳಗಳಿಂದ ಸಂಗ್ರಹಿಸಿದ ಮಣ್ಣು ಮತ್ತು ಪತ್ತೆಯಾದ ಅಸ್ಥಿಪಂಜರದ ಕುರುಹುಗಳನ್ನು ವಿಶ್ಲೇಷಣೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ಕಳುಹಿಸಲಾಗಿದೆ. ಅದರ ವರದಿ ಬಂದ್ಮೇಲೆ ತನಿಖೆ ತೀವ್ರಗೊಳ್ಳಲಿದ್ದು, ಆ ಬಳಿಕ ಮೂರು ಸ್ಥಳಗಳಲ್ಲಿ ಹೊಸದಾಗಿ ಶೋಧ ನಡೆಸಬಹುದು ಎಂದು ಮೂಲಗಳು ತಿಳಿಸಿವೆ.
ವಾರಾಂತ್ಯದೊಳಗೆ ಎಫ್ಎಸ್ಎಲ್ ವರದಿ ಎಸ್ಐಟಿಗೆ ಸಿಗುವ ಸಾಧ್ಯತೆಯಿದ್ದು, ಆ ಬಳಿಕ ತನಿಖೆ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆಯಿದೆ. ಈ ತನಿಖೆ ಮೂಲಕ ಅಸ್ಥಿಪಂಜರದ ಅವಶೇಷಗಳು ಗಂಡು ಅಥವಾ ಹೆಣ್ಣು, ಅವಶೇಷಗಳ ಅಂದಾಜು ವಯಸ್ಸು ಮತ್ತು ಎಷ್ಟು ವರ್ಷಗಳ ಹಿಂದೆ ಸಾವು ಸಂಭವಿಸಿದೆ. ದೂರುದಾರರು ಶಂಕಿಸಿದಂತೆ ಸಂಗ್ರಹಿಸಿದ ಮಣ್ಣಿನಲ್ಲಿ ಕರಗಿದ ಮಾನವ ಮೂಳೆಗಳ ಕುರುಹುಗಳಿವೆಯೇ ಎಂದು ತಿಳಿದು ಬರಲಿದೆ.
Leave feedback about this