ಮೈಸೂರು:- ಕಲಬುರಗಿ ಮೂಲದ ಬಾಲಕಿಯ ಶವ ಪತ್ತೆಯಾಗಿದ್ದು, ಸಾಂಸ್ಕೃತಿಕ ನಗರಿ ಬೆಚ್ಚಿಬಿದ್ದಿದೆ. ಹೊಟ್ಟೆಪಾಡಿಗಾಗಿ ಕುಟುಂಬ ಸದಸ್ಯರ ಜೊತೆ ಮೈಸೂರಿಗೆ ಬಂದಿದ್ದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಮೈಸೂರಿನ ವಸ್ತು ಪ್ರದರ್ಶನದ ಹತ್ತಿರ ಶವ ಪತ್ತೆ ಸಿಕ್ಕಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಟ್ಟಿಗೆಗೂಡು ವ್ಯಾಪ್ತಿಯಲ್ಲಿರುವ ವಸ್ತು ಪ್ರದರ್ಶನದ ಬಳಿ 9 ವರ್ಷದ ಬಾಲಕಿಯ ಶವ ಪತ್ತೆಯಾಗಿದ್ದು, ಮೊನ್ನೆ ಕೊಲೆಯಾದ ಗಿಲಿ ಗಿಲಿ ವೆಂಕಟೇಶ್ ಕೊಲೆಗೀಡಾದ ಘಟನಾ ಸ್ಥಳದಿಂದ ಕೂಗಳತೆ ದೂರದಲ್ಲಿ ಬಾಲಕಿಯ ಶವಪತ್ತೆಯಾಗಿದೆ.
ಅಪ್ರಾಪ್ತ ಬಾಲಕಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ದಸರಾ ಹಿನ್ನೆಲೆಯಲ್ಲಿ ಗೊಂಬೆ ಬಲೂನ್ ಆಟಿಕೆಗಳನ್ನು ಮಾರಾಟ ಮಾಡಲು ಕುಟುಂಬ ಸದಸ್ಯರ ಜೊತೆಯಲ್ಲಿ ಮೈಸೂರಿಗೆ ಬಾಲಕಿ ಬಂದಿದ್ದಳು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
Leave feedback about this