ಬೆಂಗಳೂರು ಡೆಸ್ಕ್:- ಕನ್ನಡದ ಖ್ಯಾತ ಚಲನಚಿತ್ರ ನಟಿ ಮೇಘನಾ ರಾಜ್ ಸರ್ಜಾರವರನ್ನು ಚಲನಚಿತ್ರ ನಿರ್ದೇಶಕ ಲೂಯಿಸ್ ಮಾರ್ಟಿನ್ ಭೇಟಿಯಾಗಿ ಶುಭ ಹಾರೈಸಿದರು.
ತಮಿಳು ಚಿತ್ರರಂಗದ ಮೇರು ನಟ ಕರ್ನಾಟಕದ ರಜನಿಕಾಂತ್ ಹಾಗೂ ಡಾ.ಶಿವರಾಜ್ ಕುಮಾರ್ ನಟಿಸಿರುವ ಜೈಲರ್ 2 ಚಿತ್ರದ ಚಿತ್ರೀಕರಣವು ತಮಿಳುನಾಡಿನಲ್ಲಿ ನಡೆಯುವ ಸಂದರ್ಭದಲ್ಲಿ ಚಿತ್ರೀಕರಣಲ್ಲಿ ಪಾಲ್ಗೊಂಡು ನಟನೆ ಮುಗಿಸಿ ಬೆಂಗಳೂರು ವಾಪಸ್ಸು ಬಂದ ವಿಷಯ ತಿಳಿದು ಬನ್ನೇರುಘಟ್ಟದ ಅರಕೆರೆಯ ರಯಾನ್ ವಿಲ್ಲಾದ ಮನೆಗೆ ತೆರಳಿ ಲೂಯಿಸ್ ಶುಭ ಹಾರೈಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಲೂಯಿಸ್, ಮೇಘನಾರವರ ತಂದೆ ಸುಂದರ್ ರಾಜ್, ತಾಯಿ ಪ್ರಮೀಳಾ ಜೋಷಾಯ್ ರವರನ್ನು ಸುಮಾರು ಇಪ್ಪತ್ತೈದು ವರ್ಷದಿಂದ ನೋಡುತ್ತಿದ್ದೇನೆ. ಅವರ ಸರಳತೆ ಇನ್ನೂ ಕೂಡ ಹಾಗೆಯೇ ಇದೆ. ತಂದೆ ತಾಯಿಯ ಮಾರ್ಗದಲ್ಲಿ ನಡೆಯುವ ಮೇಘನಾ ಕೂಡ ಅವರ ಹೆಜ್ಜೆಯ ಗುರುತು. ಕನ್ನಡ ಸೇರಿದಂತೆ ತಮಿಳು ಮಲಯಾಳಂ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಇಂತಹ ಸರಳ, ನಯವಾದ ಮನಸ್ಸು ಇರುವುದು ವಿರಳವಾಗಿದೆ, ಮೇಘನಾರವರಂತಹ ಇನ್ನಷ್ಟು ನಟ,ನಟಿಯರು ಚಿತ್ರರಂಗಕ್ಕೆ ಪ್ರವೇಶ ಮಾಡಬೇಕು ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮೇಘನಾ ರಾಜ್ ಮಾತೃಶ್ರೀ ಕನ್ನಡದ ಖ್ಯಾತ ನಟಿ ಪ್ರಮೀಳಾ ಜೋಷಾಯ್ ಪತ್ರಕರ್ತರಾದ ಶೇಕಬ್ಬರವರು ಉಪಸ್ಥಿತರಿದ್ದರು.
Leave feedback about this