ಮಂಗಳೂರು:- ಧರ್ಮಸ್ಥಳ ಪ್ರಕರಣದ ಕುರಿತು ತಮ್ಮ ಬೆಂಬಲ ಸೂಚಿಸಿ ಬಿಜೆಪಿ ನಾಯಕರು ಇಂದು ಧರ್ಮಸ್ಥಳ ಚಲೋಗೆ ಕರೆ ನೀಡಿದ್ದಾರೆ. ಈಗಾಗಲೇ ಧರ್ಮಸ್ಥಳದಲ್ಲಿ ದೇವರ ದರ್ಶನ ಪಡೆದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಈ ಕಾರ್ಯಕ್ರಮದಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ನೀಡಿದ್ದಾರೆ.
ಧರ್ಮಸ್ಥಳದಲ್ಲಿ ಹಲವು ಶವಗಳನ್ನು ಹೂತಿಟ್ಟಿದ್ದೆ, ಪ್ರಭಾವಿಗಳ ಅಣತಿಯ ಮೇರೆಗೆ ಇದನ್ನು ಮಾಡಿದ್ದೆ ಎಂದು ವ್ಯಕ್ತಿಯೊಬ್ಬ ದೂರು ನೀಡಿದ್ದು ಧರ್ಮಸ್ಥಳ ಪ್ರಕರಣ ಭುಗಿಲೇಳಲು ಕಾರಣವಾಗಿತ್ತು. ಸರ್ಕಾರ ಈ ತನಿಖೆಗೆ ಎಸ್ಐಟಿ ರಚಿಸಿತ್ತು. ಈಗ ಧರ್ಮಸ್ಥಳದ ವಿರುದ್ದ ಷಡ್ಯಂತ್ರದ ಪಿತೂರಿಯ ಗುಮಾನಿ ಎದುರಾಗಿದ್ದು, ದೂರುದಾರನನ್ನೇ ಬಂಧಿಸಲಾಗಿದೆ.
ಈ ಕುರಿತು ಬಿಜೆಪಿ ನಾಯಕ ಎಸ್.ಆರ್.ವಿಶ್ವನಾಥ್ ಧರ್ಮಸ್ಥಳದಲ್ಲಿ ಮಾತನಾಡಿ, ಈ ಆರೋಪಗಳು ಸುಳ್ಳು ಎಂದು ಈಗಾಗಲೇ ಸಾಬೀತಾಗಿದೆ. ನಾವೆಲ್ಲರೂ ಧರ್ಮಸ್ಥಳದೊಂದಿಗೆ ಒಗ್ಗಟ್ಟಾಗಿ ನಿಲ್ಲಲಿದ್ದೇವೆ. ಇದರ ಅಂಗವಾಗಿ ಇಂದು ಧರ್ಮಸ್ಥಳ ಚಲೋ ಹೆಸರಿನಲ್ಲಿ ಪ್ರತಿಭಟನೆ ನಡೆಸಲಾಗುವುದು. ಒಂದು ಲಕ್ಷಕ್ಕೂ ಹೆಚ್ಚು ಮಂದಿ ಸೇರುವ ನಿರೀಕ್ಷೆಯಿದ್ದು, ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಎಲ್ಲಾ ರಾಜಕೀಯ ಪಕ್ಷಗಳ ಕಾರ್ಯಕರ್ತರು , ಭಕ್ತಾದಿಗಳು, ಆಸ್ತಿಕರು ಭಾಗವಹಿಸಲಿದ್ದಾರೆ.
ಧರ್ಮಸ್ಥಳದಲ್ಲಿ ನೂರಾರು ಕೊಲೆ ನಡೆದಿದೆ ಎಂದು ಅಪಪ್ರಚಾರ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಮಾಸ್ಕ್ ಮ್ಯಾನ್ ಹೇಳಿಕೆಯನ್ನು ಆಧರಿಸಿ ಎಸ್ಐಟಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದೆ. ಇದೀಗ ದೂರುದಾರ ಜಯಂತ್ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾನೆ.
ಧರ್ಮಸ್ಥಳದಲ್ಲಿ ಶವ ಹೂತಿರುವುದನ್ನು ನೋಡಿದ್ದೇನೆ ಎಂದು ಬಂದಿದ್ದ ಜಯಂತ್ ಟಿ, ಈ ಹಿಂದೆ ಬುರುಡೆ ಸಮೇತ ದೆಹಲಿಗೆ ಹೋಗಿರುವ ಬಗ್ಗೆ ಹಾಗೂ ಬುರುಡೆ ಗ್ಯಾಂಗ್ ಸುಪ್ರೀಂಕೋರ್ಟ್ ಗೆ ತೆರಳಿದ್ದ ಫೋಟೋವನ್ನು ಕೂಡ ಜಯಂತ್ ರೀವಿಲ್ ಮಾಡಿದ್ದರು. ಇದರ ಬೆನ್ನಲ್ಲೇ ಹೊಸ ಬಾಂಬ್ ವೊಂದನ್ನು ಸಿಡಿಸಿದ್ದಾರೆ.
ಧರ್ಮಸ್ಥಳ ಗ್ರಾಮದಲ್ಲಿ ಉತ್ಖನನಕ್ಕೂ ಮುನ್ನ ಬುರುಡೆ ಪ್ರಕರಣದ ಪ್ರಮುಖ ಆರೋಪಿ ಚಿನ್ನಯ್ಯನನ್ನು ಪ್ರತಿಷ್ಠಿತ ಸ್ವಾಮೀಜಿಯ ಬಳಿ ಕರೆದುಕೊಂಡು ಹೋಗಲಾಗಿತ್ತು. ಈ ಬುರುಡೆ ಪ್ಲಾನ್ ಬಗ್ಗೆ ಅವರಿಗೂ ಕೂಡ ಸಂಪೂರ್ಣ ಮಾಹಿತಿ ಇದೆ ಸದ್ಯದಲ್ಲೇ ಅವರು ಯಾರು ಎಂದು ಹೇಳುತ್ತೇನೆ ಎಂದು ಜಯಂತ್ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಸ್ವಾಮೀಜಿಯ ಭೇಟಿಗೆ ನಾನು ಹೋಗಿರಲಿಲ್ಲ.. ಚಿನ್ನಯ್ಯನನ್ನು ಬೇರೆಯವರು ಕರೆದುಕೊಂಡು ಹೋಗಿದ್ದರು. ಈ ವೇಳೆ ಚಿನ್ನಯ್ಯಗೆ ಸ್ವಾಮೀಜಿಯ ಮುಂದೆ ಸುಳ್ಳು ಹೇಳಲು ಆಗದೇ ಎಲ್ಲಾ ಸತ್ಯವನ್ನು ಹೇಳಿದ್ದಾನೆ. ಈ ಬುರುಡೆ ಬಗ್ಗೆ ಸ್ವಾಮೀಜಿಗೂ ಗೊತ್ತು. ಸಮಯ ಬಂದಾಗ ಅವರ ಹೆಸರನ್ನು ತಿಳಿಸುತ್ತೇನೆ ಎಂದರು.
ಧರ್ಮಸ್ಥಳದಲ್ಲಿ ಎಲ್ಲೆಲ್ಲಿ ಎಷ್ಟು ಶವಗಳನ್ನು ಹೂತು ಹಾಕಿದ್ದಾರೆ ಎಂದು ಗಿರೀಶ್ ಮಟ್ಟಣ್ಣವರ್ಗೂ ಗೊತ್ತು, ಎಸ್ಐಟಿ ರಚನೆಗೂ ಮುನ್ನ ಚಿನ್ನಯ್ಯನ ಜೊತೆ ಗಿರೀಶ್ ಮಟ್ಟಣ್ಣವರ್ ಕೂಡ ಉತ್ಖನನ ಮಾಡಿದ ಸ್ಥಳಕ್ಕೆ ಭೇಟಿ ನೀಡಿದ್ದರು. ಆಗ ಚಿನ್ನಯ್ಯ ತೋರಿಸಿದ್ದ ಜಾಗವೇ ಬೇರೆ ಈಗ ಎಸ್ಐಟಿಗೆ ತೋರಿಸಿದ್ದ ಜಾಗವೇ ಬೇರೆ ಎಂದು ಜಯಂತ್ ತಿಳಿಸಿದ್ದಾರೆ.
ಈ ಹಿಂದೆಯೇ ಗಿರೀಶ್ ಮಟ್ಟಣ್ಣವರ್ ಗೆ ಶವ ಹೂತಿಟ್ಟ ಜಾಗವನ್ನು ತೋರಿಸಿದ್ದ, ಆದರೆ ಎಸ್ಐಟಿಗೆ ಬೇರೆ ಜಾಗವನ್ನು ತೋರಿಸಿದ್ದಾನೆ. ಆದರೆ ಏಪ್ರಿಲ್ ತಿಂಗಳಲ್ಲಿ ಈ ವಿಷಯ ನನಗೆ ಗೊತ್ತಾಗಿದ್ದು, ಚಿನ್ನಯ್ಯನಿಗೆ ಯಾರೋ ಜೀವ ಬೆದರಿಕೆ ಹಾಕಿದ್ದಾರೆ. ಅದೇ ಕಾರಣಕ್ಕೆ ಚಿನ್ನಯ್ಯ ಶವ ಹೂತಿಟ್ಟ ಸ್ಥಳ ತೋರಿಸಿಲ್ಲ ಎಂದು ಹೇಳಿದರು.
ಒಂದು ವೇಳೆ ಆತ ನಿಜವಾದ ಸ್ಥಳ ತೋರಿಸಿದ್ದರೆ ದೊಡ್ಡ ಮಟ್ಟದಲ್ಲಿ ಹೆಣ್ಣು ಮಕ್ಕಳ ಹೊತ್ತಿರುವುದು ಪತ್ತೆಯಾಗುತಿತ್ತು ಎಂದು ಜಯಂತ್ ತಿಳಿಸಿದರು. ದೇವಸ್ಥಾನದ ಬಗ್ಗೆ ನಾವು ಪಿತೂರಿ ಮಾಡುತ್ತಿಲ್ಲ.. ಕೆಲವರು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ, ಇದೆಲ್ಲ ಒಂದು ಹಂತಕ್ಕೆ ಬರಲಿ ಆಮೇಲೆ ತೋರಿಸುತ್ತೇವೆ ಎಂದು ಹೇಳಿದ್ದಾರೆ.
Leave feedback about this