ಬೆಂಗಳೂರು:- ಪೂಜೆ ಮಾಡುವುದು ಇಸ್ಲಾಮ್ನಲ್ಲಿ ನಿಷಿದ್ಧ, ಮನುಷ್ಯರಿಗೆ, ಸೃಷ್ಟಿಗೆ ಪೂಜೆ ಮಾಡುವಂತಿಲ್ಲ. ಅಲ್ಹಾನಿಗೆ ಮಾತ್ರ ಆರಾಧನೆ ಮಾಡಬಹುದು ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಮುಹಮ್ಮದ್ ಶಫಿ ಸ-ಅದಿ ಹೇಳಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮನುಷ್ಯರಿಗೆ, ಸೃಷ್ಟಿಗೆ ಪೂಜೆ ಮಾಡುವುದು ಶಿರ್ಕ್ ಮಹಾಪಾಪ. ಇದು ಇಸ್ಲಾಮಿನ ಕಟ್ಟಾಜ್ಞೆ ಎಂದು ಅವರು ಹೇಳಿದ್ದಾರೆ. ಇಸ್ಲಾಮ್ನಲ್ಲಿ ಮೂರ್ತಿ ಪೂಜೆ ಇಲ್ಲ. ಇಸ್ಲಾಮ್ನಲ್ಲಿ ಏನಿದ್ದರೂ ‘ಲಾ ಇಲಾಹಾ ಇಲ್ಲಲ್ಲಾ, ಮೊಹಮ್ಮದ್ ರಸೂಲುಲ್ಲಾ’ ಎನ್ನುವುದು ಮಾತ್ರ ರೂಢಿಯಲ್ಲಿದೆ. ಇದರ ಅರ್ಥ “ಅಲ್ಲಾಹನನ್ನು ಹೊರತುಪಡಿಸಿ ಅಸ್ತಿತ್ವದಲ್ಲಿ ಯಾವುದೇ ದೇವರು ಸರಿಯಾಗಿ ಪೂಜಿಸಲ್ಪಡುವುದಿಲ್ಲ ಎನ್ನುವುದು ಎಂದು ಅವರು ಹೇಳಿದ್ದಾರೆ.
ಅಲ್ಹಾನಿಲ್ಲದೇ ಆರಾಧ್ಯನಿಲ್ಲ. ಎಲ್ಲರಿಗೂ ಇರುವುದು ದೇವರೊಬ್ಬನೇ. ಆ ಅಲ್ಹಾನಿಗೆ ಆರಾಧನೆ ಮಾಡಿದರೆ ಮಾತ್ರ ಮುಸ್ಲಿಮನಾಗುವುದು. ಬೇರೆ ಯಾರಿಗೂ ಆರಾಧನೆ ಮಾಡುವ ಹಾಗಿಲ್ಲ, ಪೂಜೆಯನ್ನೂ ಮಾಡುವ ಹಾಗಿಲ್ಲ ಎಂದು ಶಫಿ ಸ-ಅದಿ ಹೇಳಿದ್ದಾರೆ. ಅವರವರ ಧರ್ಮಕ್ಕೆ ಅನುಸಾರವಾಗಿ ಪೂಜೆ ಮಾಡಿ ಎಂದು ಅಲ್ಹಾನೇ ಹೇಳುತ್ತಾರೆ. ನಿಮ್ಮ ಧರ್ಮ ನಿಮಗೆ, ಅವರವರಿಗೆ ಆ ಧರ್ಮ ಎಂದಿರುವ ಅವರು, ಅಲ್ಹಾನೇ ಅವಕಾಶ ಕೊಡದಿದ್ದ ಮೇಲೆ ಇನ್ನು ಅದನ್ನು ಪಾಲನೆ ಮಾಡಲು ನಾವ್ಯಾರು ಎಂದು ಪ್ರಶ್ನಿಸಿದ್ದಾರೆ.
Leave feedback about this