ಚಿತ್ರದುರ್ಗ

ಅಕ್ರಮ ಹಣ ವರ್ಗಾವಣೆ: ಪಪ್ಪಿ ಆಗಸ್ಟ್ 28 ರವರೆಗೆ ಇಡಿ ಕಸ್ಟಡಿಗೆ

ಚಿತ್ರದುರ್ಗ:- ಆನ್‌ಲೈನ್‌ ಬೆಟ್ಟಿಂಗ್‌, ಗೇಮಿಂಗ್ ಆಯಪ್‌ಗಳ ಮೂಲಕ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಪ್ರಸ್ತುತ ಇಡಿ ಕಸ್ಟಡಿಯಲ್ಲಿದ್ದಾರೆ. ಆದರೂ ಅವರು ಯಾವುದೇ ತನಿಖೆಗೆ ಸಹಕರಿಸುತ್ತಿಲ್ಲ ಎನ್ನಲಾಗಿದ್ದು, ಇದರಿಂದ ಇಡಿ ಅಧಿಕಾರಿಗಳು ತಲೆಚ್ಚಿಕೊಳ್ಳುವಂತವಾಗಿದೆ.

ವೀರೇಂದ್ರ ಪಪ್ಪಿ ವಿಚಾರಣೆ ವೇಳೆ ಅಧಿಕಾರಿಗಳ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ, ಹಣಕಾಸು ವ್ಯವಹಾರದ ಮಾಹಿತಿಯ ಬಗ್ಗೆ ಕೇಳಿದರೆ ಅಡಿಟರ್‌ನ ಕೇಳಬೇಕು ಎನ್ನುತ್ತಿದ್ದಾರೆ. ಇದರಿಂದ ಇಡಿಗೆ ದೊಡ್ಡ ತಲೆನೋವಾಗಿದೆ. ಹಣಕಾಸು ವ್ಯವಹಾರ ಸಂಬಂಧ 17 ಬ್ಯಾಂಕ್‍ಗಳಿಗೆ ಇಡಿ ಪತ್ರ ಬರೆದಿದ್ದು, 5 ವರ್ಷಗಳ ಅಕೌಂಟ್ ಸ್ಟೇಟ್ಮೆಂಟ್ ಕೇಳಿದೆ.

ಗೇಮಿಂಗ್ ಆಯಪ್‌ಗಳ ಮೂಲಕ ಅಕ್ರಮ ಹಣ ವರ್ಗಾವಣೆ ಮತ್ತು ಮನಿ ಲಾಂಡರಿಂಗ್ ಆರೋಪದಡಿ ಇಡಿ ಕಾರ್ಯಾಚರಣೆ ನಡೆಸಿತ್ತು. ಪಪ್ಪಿ ಅವರನ್ನು ಬೆಂಗಳೂರಿನ ಕೋರಮಂಗಲದ ಎನ್‌ಜಿವಿಯಲ್ಲಿರುವ 35 ಸಿಸಿಹೆಚ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನಂತರ ಇಡಿ ವಶಕ್ಕೆ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಇಡಿ ಅಧಿಕಾರಿಗಳು ಶಾಸಕ ವೀರೇಂದ್ರ ಪಪ್ಪಿಯನ್ನು 14 ದಿನಗಳ ಕಸ್ಟಡಿಗೆ ನೀಡುವಂತೆ ಮನವಿ ಸಲ್ಲಿಸಿತ್ತಾದರೂ ನ್ಯಾಯಾಲಯ ಆಗಸ್ಟ್ 28 ರವರೆಗೆ ಇಡಿ ಕಸ್ಟಡಿಗೆ ಅನುಮತಿ ನೀಡಿದೆ.

6 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ, ಲೋಟ, ತಟ್ಟೆ, ದೀಪಗಳ ರಾಶಿ, ಪ್ರತಿಷ್ಠಿತ ಬ್ಯಾಂಕ್‌ಗಳ ಕಾರ್ಡ್ ಭಂಡಾರ, 1 ಕೋಟಿ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿ ಪತ್ತೆಯಾಗಿದೆ. ವೀರೇಂದ್ರ ಸಂಪತ್ತಿನ ಕೋಟೆಯನ್ನೇ ಛಿದ್ರವಾಗಿಸಿರೋ ಇಡಿ ಅಧಿಕಾರಿಗಳು 12 ಕೋಟಿ ಹಣದ ಜಪ್ತಿಗೆ ಸುಮ್ಮನಾಗಿಲ್ಲ. ಮನೆಯ ಇಂಚಿಂಚನ್ನೂ ಜಾಲಾಡ್ತಿದ್ದಂತೆ ನಿಧಿಯೇ ಕೈಗೆ ಸಿಕ್ಕಿತ್ತು. ಪಪ್ಪಿ ಮನೆಯಲ್ಲಿ ಬರೋಬ್ಬರಿ ಆರು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಸಾಲದ್ದಕ್ಕೆ ಬೆಳ್ಳಿ ಲೋಟ, ದೀಪಗಳ ರಾಶಿಯೇ ಸಿಕ್ಕಿದೆ. ಉಳಿದಂತೆ ಪಪ್ಪಿ ಮನೆ ಕಪಾಟಿನಲ್ಲಿ ಸುರಕ್ಷಿತವಾಗಿದ್ದ 1 ಕೋಟಿ ಮೌಲ್ಯದ ವಿದೇಶಿ ಕರೆನ್ಸಿಯನ್ನೂ ವಶಕ್ಕೆ ಪಡೆಯಲಾಗಿದೆ. ಇದರೊಟ್ಟಿಗೆ ಬ್ಯಾಂಕ್‌ಗಳ ಕ್ರೆಡಿಟ್, ಡೆಬಿಟ್ ಕಾರ್ಡ್‌ ಪತ್ತೆಯಾಗಿತ್ತು. ಕೆ.ಸಿ ವೀರೇಂದ್ರ ಪಪ್ಪಿ, ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದು, ರಿಯಲ್ ಎಸ್ಟೇಟ್, ಕ್ಯಾಸಿನೊ, ಮತ್ತು ಗೇಮಿಂಗ್ ವ್ಯವಹಾರಗಳ ಮೂಲಕ ಆತ ಗಣನೀಯ ಸಂಪತ್ತು ಗಳಿಸಿದ್ದಾನೆ ಎಂದು ಆರೋಪಿಸಲಾಗಿದೆ. ಗೋವಾದ ಎರಡು ಕಾಸಿನೊಗಳಲ್ಲಿ ಕಾರ್ಡ್ ಗೇಮ್‌ಗೆ ಲೈಸೆನ್ಸ್ ಪಡೆದಿದ್ದು, ನೇಪಾಳದಲ್ಲಿ ಕಾಸಿನೊವೊಂದನ್ನು ಸ್ಥಾಪಿಸಿದ್ದಾನೆ ಎಂದು ಹೇಳಲಾಗುತ್ತಿದೆ.

ವಿರೇಂದ್ರ ಒಡೆತನದ ಕಂಪನಿಗಳಿಂದ ಗೇಮಿಂಗ್ ಆಯಪ್ಗಳಿಗೆ ಅಕ್ರಮ ಹಣ ವರ್ಗಾವಣೆ ಮತ್ತು ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿಬಂದಿತ್ತು. ಈ ಸಂಬಂಧ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕಳೆದ ಶುಕ್ರವಾರ ಶಾಸಕ ಕೆ.ಸಿ ವೀರೇಂದ್ರ ಹಾಗೂ ಅವರ ಸಹೋದರರ ಮನೆಗಳ ಮೇಲೆ ದಾಳಿ ನಡೆಸಿದ್ದರು. ಚಿತ್ರದುರ್ಗ, ಚಳ್ಳಕೆರೆ, ಬೆಂಗಳೂರು, ಗೋವಾ ಸೇರಿದಂತೆ 30 ಕಡೆಗಳಲ್ಲಿ ದಾಳಿ ಮಾಡಿದರು. ಶಾಸಕ ಕೆಸಿವಿ ಮನೆಗಳು, ಕಂಪನಿಗಳು ಮತ್ತು ಇತರರ ಮನೆ, ಕಚೇರಿಗಳು ಸೇರಿ 30 ಕಡೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದರು. ಅವರನ್ನು ಇಡಿ ಅಧಿಕಾರಿಗಳು ಸಿಕ್ಕಿಂನ ಇಲ್ಲಿ ಬಂಧಿಸಿದ್ದರು.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video