ಟೆಹ್ರಾನ್:- ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ (86) ಮೃತಪಟ್ಟು ನಾಲ್ಕು ದಿನಗಳಾಗಿವೆ. ಕಳೆದ ಶನಿವಾರ ಖಮೇನಿಯವರಿದ್ದ ಕಚೇರಿಯ ಟೆಹರಾನ್ ಮೇಲೆ ದಾಳಿ ನಡೆಸುವ ಮೂಲಕ ಯುದ್ಧ ಆರಂಭಿಸಿದ ಇಸ್ರೇಲ್ ಜತೆ ಕೈ ಜೋಡಿಸಿದ ಯುಎಸ್ ಮಾರ್ಚ್ 1ರಂದು ಖಮೇನಿ ನಿಧನವನ್ನು ಅಧಿಕೃತವಾಗಿ ಪ್ರಕಟಿಸಿತು.
ವರ್ಷಗಳ ಹಿಂದೆ ಇದೇ ಟೆಹರಾನ್ನ ಪ್ರಮುಖ ಇಮಾಮ್ ಖಮೇನಿ ಪ್ರಾರ್ಥನಾ (ಮೊಸಲ್ಲಾ) ಮಂದಿರದಲ್ಲಿ ಇಸ್ರೇಲ್ ವಿರುದ್ಧ ಪ್ರತಿಕಾರದ ಮಾತುಗಳಾಡಿದ್ದ ಖಮೇನಿ ಭಾಷಣ ಕೇಳಲು ಲಕ್ಷಾಂತರ ಜನರು ಸೇರಿದ್ದರು. ಇಂದು ಅದೇ ಮೊಸಲ್ಲಾದಲ್ಲಿ ಮೂರು ದಿನಗಳಿಂದ ಅಪಾರ ಜನ ಖಮೇನಿಯ ಅಂತಿಮ ದರ್ಶನ ಪಡೆದಿದ್ದಾರೆ. ಇಂದು ಮಾ.4ರ ಬುಧವಾರ ಅಂತಿಮ ವಿಧಿ ವಿಧಾನಗಳು ನೆರವೇರಲಿವೆ ಎಂದು ಹೇಳಿಕೆ ನೀಡಿದ್ದರಾದರೂ ಸರ್ವೋಚ್ಚ ನಾಯಕನ ವಿದಾಯಕ್ಕೆ ಧಾರ್ಮಿಕ ಮುಖಂಡರು ಸೇರಿದಂತೆ ಹಲವು ಮಹಾನ್ ನಾಯಕರು ಆಗಮಿಸುವ ಹಿನ್ನೆಲೆಯಲ್ಲಿ ವಿದಾಯದ ದಿನಾಂಕ ಮುಂದೂಡಲಾಗಿದೆ.
ಇರಾನ್ ಜನತೆ ಖಮೇನಿಯವರಿಗೆ ಅಂತಿಮ ವಿದಾಯ ಹೇಳಲಿದ್ದಾರೆ. ವಿದಾಯ ಸಮಾರಂಭವು ಮುಂದಿನ ಮೂರು ದಿನಗಳವರೆಗೆ ಮುಂದುವರಿಸಲು ತೀರ್ಮಾನಿಸಲಾಗಿದೆ. ಇರಾನ್ನಾದ್ಯಂತ ಸುಮಾರು 40 ದಿನ ಶೋಕಾಚರಣೆ ನಡೆಯಲಿದೆ ಎನ್ನಲಾಗಿದೆ. ಖಮೇನಿಯವರ ಅಂತ್ಯಕ್ರಿಯೆ ಮೆರವಣಿಗೆಗೆ ಸಂಬಂಧಿಸಿದಂತೆ ಇನ್ನೂವರೆಗೂ ಯಾವುದೇ ನಿರ್ಧಾರವಾಗಿಲ್ಲ. ಶೀಘ್ರವೇ ಆ ಬಗ್ಗೆಯು ಇರಾನ್ ಸರ್ಕಾರ/ಆಡಳಿತ ಮಂಡಳಿ ಘೋಷಿಸಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಖಮೇನಿಯವರ ಆಪ್ತ ವಲಯದ ಅಧಿಕಾರಿಗಳನ್ನು ಗುರುತಿಸಿ ಚಿಪ್ ಒಳಗೊಂಡ ಡೆಂಟಲ್ ಇಂಪ್ಲಾಂಟ್ ಅಳವಡಿಸುವ ಮೂಲಕ ನಿಖರವಾಗಿ ಲೋಕೇಷನ್ ಪತ್ತೆ ಮಾಡಲಾಗಿತ್ತು. ಶನಿವಾರ (ಫೆ.28) ನಡೆದ ಅಮೆರಿಕ-ಇಸ್ರೇಲ್ ದಾಳಿಗೆ ಡೆಂಟಲ್ ಇಂಪ್ಲಾಂಟ್ ಚಿಪ್ ಖಮೇನಿ ಉಳಿದುಕೊಂಡಿದ್ದ ಸ್ಥಳದ ನಿಖರ ಮಾಹಿತಿ ನೀಡಿತ್ತು ಎನ್ನಲಾಗಿದೆ.
Leave feedback about this