ಮಂಗಳೂರು:- ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ತನ್ನ ಕ್ಲಾಸ್ಮೇಟ್ ಜೊತೆಯೇ ದೈಹಿಕ ಸಂಪರ್ಕ ಬೆಳೆಸಿ ಆಕೆ ಗರ್ಭಿಣಿಯಾಗಿ ಮಗುವಾದ ನಂತರವೂ ಮದುವೆಗೆ ನಿರಾಕರಿಸಿದ ಪ್ರಕರಣದಲ್ಲಿ ಈಗ ಮಗುವಿನ ತಾಯಿ ಆತ್ಮಹತ್ಯೆಗೆ ಯತ್ನಿಸಿದ ಕಹಿ ಘಟನೆವೊಂದು ಬೆಳಕಿಗೆ ಬಂದಿದೆ.
ಪುತ್ತೂರಿನ ಬಿಜೆಪಿ ನಾಯಕರೊಬ್ಬರ ಪುತ್ರ ಜೆ.ಕೃಷ್ಣ ರಾವ್ ಎಂಬಾತ ತನ್ನ ಕ್ಲಾಸ್ಮೇಟ್ ಜೊತೆಗೆ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಯುವತಿ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಳು. ಈ ಪ್ರಕರಣದಲ್ಲಿ ಡಿಎನ್ಎ ಪರೀಕ್ಷೆ ನಡೆದು ಜೆ.ಕೃಷ್ಣ ರಾವ್ ಮಗುವಿನ ತಂದೆ ಎಂಬುದು ಸಾಬೀತಾಗಿದ್ದರೂ ಆತನ ಕುಟುಂಬದವರು ಜಾತಿಯ ಕಾರಣದಿಂದ ಇಬ್ಬರ ಮಧ್ಯೆ ಮದುವೆಗೆ ನಿರಾಕರಿಸಿದ್ದಾರೆ. ಬಿಜೆಪಿಯೂ ಸೇರಿದಂತೆ ಹಲವು ಸಂಘಟನೆಗಳು ಕುಟುಂಬದವರ ಜೊತೆ ಮಾತುಕತೆ ನಡೆಸಿ ಯುವತಿಯನ್ನು ಮದುವೆ ಮಾಡಿಕೊಳ್ಳುವಂತೆ ಕೇಳಿದ್ದರು. ಆದರೆ, ಜೆ ಕೃಷ್ಣ ರಾವ್ ಮನೆಯವರು ಹಠಕ್ಕೆ ಬಿದ್ದು, ಮದುವೆಗೆ ಯಾವುದೇ ಕಾರಣಕ್ಕೂ ಒಪ್ಪದೇ ಹೋದ ಕಾರಣ ಈ ವಿಚಾರ ಬೀದಿ ರಂಪಾಟವಾಗಿ ರಾಜ್ಯದ್ಯಾಂತ ಸುದ್ದಿಯಾಗಿತ್ತು.
ಈ ಪ್ರಕರಣದಲ್ಲಿ ಜೆ. ಕೃಷ್ಣ ರಾವ್ ತಾನು ಮಗುವಿನ ತಂದೆ ಅಲ್ಲ ಎಂದು ಹೇಳಿದ್ದನು. ಹೀಗಾಗಿ ಡಿಎನ್ಎ ಪರೀಕ್ಷೆ ಕೂಡ ನಡೆದು, ಆತನೇ ಮಗುವಿನ ತಂದೆ ಎಂಬುದು ಸಾಬೀತಾಗಿತ್ತು. ಜೊತೆಗೆ ಈ ಪ್ರಕರಣದಲ್ಲಿ ಆತ ಜೈಲಿಗೂ ಹೋಗಿ ಬಂದಿದ್ದ. ಆದರೆ, ಆತ ಯಾವುದೇ ಶಿಕ್ಷೆ ಇಲ್ಲದೇ ಎರಡೇ ತಿಂಗಳಿಗೆ ಜೈಲಿನಿಂದ ಹೊರಗೆ ಬಂದಿದ್ದು, ಇದರಿಂದ ಯುವತಿ ಖಿನ್ನತೆಗೆ ಜಾರಿದ್ದಳು. ಅಲ್ಲದೇ ಯುವತಿಗೆ ಸಾಮಾಜದಲ್ಲಿ ವ್ಯಾಪಕವಾದ ಟೀಕೆಗಳು ಕೇಳಿ ಬಂದಿದ್ದವು. ಸೋಶಿಯಲ್ ಮೀಡಿಯಾದಲೂ ಈ ಸುದ್ದಿಗಳಿಗೆ ಯುವತಿಯನ್ನು ನಿರಂತರವಾಗಿ ಹೀಗೆಳೆಯುವುದು ನಡೆಯುತ್ತಿತ್ತು. ಇದರಿಂದಾಗಿ ಮನದನೊಂದ ಯುವತಿಗೆ ಸಾಯುವುದಕ್ಕೆ ಯತ್ನಿಸಿದ್ದಾಳೆ ಎಂದು ವರದಿಯಾಗಿದೆ. ಸೋಮವಾರ ಈ ಘಟನೆ ನಡೆದಿದ್ದು, ಕೂಡಲೇ ಯುವತಿಯ ಮನೆಯವರು ಗಮನಿಸಿ ತಕ್ಷಣ ಆಕೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಯುವತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದಿದೆ.
ಈತನ ಕುಟುಂಬದೊಂದಿಗೆ ಯಾರ ಮಾತುಕತೆಯೂ ಫಲಪ್ರದವಾಗದೇ ಆರೋಪಿ ಜೆ.ಕೃಷ್ಣರಾವ್ ಆರಾಮವಾಗಿ ಓಡಾಡಿಕೊಂಡಿದ್ದಾನೆ. ಇದೆಲ್ಲದರಿಂದ ನೊಂದು ಸಂತ್ರಸ್ತ ಮಹಿಳೆ ಮಗುವಿನ ತಾಯಿ ಸಾವಿಗೆ ಶರಣಾಗಲು ಯತ್ನಿಸಿದ್ದಾರೆ .
Leave feedback about this