ಬೆಂಗಳೂರು ಡೆಸ್ಕ್:- ಶ್ರೀ ಪಾಂಡುರಂಗಸ್ವಾಮಿ ಭಾವಸಾರ ಭಕ್ತ ಮಂಡಳಿಯ ದೇವಸ್ಥಾನ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಅನಂತ್ ಕುಮಾರ್ ಕೆ.ಜಿ ರವರು ಬುಧವಾರ ವಿಧಾನ ಪರಿಷತ್ ಸದಸ್ಯೆಯಾದ ಡಾ.ಆರತಿಕೃಷ್ಣರವರನ್ನು ವಿಕಾಸ ಸೌಧದ ಕಚೇರಿಯಲ್ಲಿ ಭೇಟಿ ಮಾಡಿದರು.
ಶ್ರೀ ಪಾಂಡುರಂಗಸ್ವಾಮಿ ದೇವಸ್ಥಾನ ನಿರ್ಮಾಣ ಮಾಡಲು ಬಹಳ ವರ್ಷಗಳಿಂದ ಶ್ರಮಿಸುತ್ತಿದ್ದು, ಬೆಂಗಳೂರು ಬಸವನಗುಡಿ ಸಮೀಪದ ಶ್ರೀ ಕಾರಂಜಿ ಆಂಜನೇಯಸ್ವಾಮಿ ದೇವಾಲಯ ಸಮೀಪ ಮುಜರಾಯಿ ಇಲಾಖೆಗೆ ಸೇರಿದ ಖಾಲಿ ನಿವೇಶನ ಶ್ರೀ ಪಾಂಡುರಂಗ ಸ್ವಾಮಿ ದೇವಾಲಯ ನಿರ್ಮಿಸಲು ಅವಕಾಶ ನೀಡಲು ಸಂಬಂಧಪಟ್ಟ ಸಚಿವರಿಗೆ ಸಲಹೆ ನೀಡಲು ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾಧ್ಯಮದೊಂದಿಗೆ ಮಾತನಾಡಿದ ನಿರ್ಮಾಣ ಸಮಿತಿ ಅಧ್ಯಕ್ಷರಾದ ಅನಂತ್ ರವರು, ನಾವು ಕರ್ನಾಟಕದಲ್ಲಿ ಅತೀ ಹಿಂದುಳಿದ ವರ್ಗದವರಾಗಿದ್ದೇವೆ, ನಮಗೆ ದೇವಸ್ಥಾನದ ಅವಶ್ಯಕತೆ ಬಹಳ ಇದೆ. ನಾವು ಪೂಜೆ ಪುರಸ್ಕಾರದಂತಹ ಕಾರ್ಯಗಳನ್ನು ಮಾಡಿಕೊಂಡು ಬರುವವರು ಇಲ್ಲಿ ದೇವಸ್ಥಾನ ನಿರ್ಮಾಣ ಮಾಡಲು ಸರ್ಕಾರ ಸಂಬಂಧಿಸಿದ ಇಲಾಖೆ ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡುವುದೆಂಬುದು ನಂಬಿಕೆ ಇದೆ. ಡಾ.ಆರತಿಕೃಷ್ಣರವರು ನಮ್ಮ ಮನವಿ ಸ್ವೀಕರಿಸಿ ಪೂರ್ಣ ಪ್ರಮಾಣದ ಭರವಸೆ ನೀಡಿ ನಮ್ಮ ಸಮಾಜಕ್ಕೆ ದೇವಸ್ಥಾನ ನಿರ್ಮಾಣ ಮಾಡುವುದರ ಮೂಲಕ ನ್ಯಾಯ ದೊರಕಿಸಿ ಕೊಡುವ ಭರವಸೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಹಿಳಾ ಸಮಿತಿಯ ಮುಖ್ಯಸ್ಥೆ ಕವಿತಾ ಮಾಳ್ವೆ ನಿರ್ಮಾಣ ಸಮಿತಿಯ ಕಾರ್ಯದರ್ಶಿ ಕಿರಣ್ ಕುಮಾರ್ ನವಲೆ ಉಪಸ್ಥಿತರಿದ್ದರು.
Leave feedback about this