ಕೋಲಾರ:- 2001ರಲ್ಲಿ ಮುಚ್ಚಿರುವ ಚಿನ್ನದ ಗಣಿಗಳ ಪ್ರದೇಶದಲ್ಲಿ ಚಿನ್ನ ಮಿಶ್ರಿತ ಮಣ್ಣನ್ನು ಚೀಲಗಳಲ್ಲಿ ತುಂಬಿಕೊಂಡು ಕಳವು ಮಾಡುತ್ತಿದ್ದ ಕೆಲವರನ್ನು ಉರಿಗಾಂ ಪೊಲೀಸರು ಬಂಧಿಸಿದ್ದಾರೆ.
ಉರಿಗಾಂ ಠಾಣಾ ವ್ಯಾಪ್ತಿಗೆ ಸೇರಿದ ಬಿಜಿಎಂಎಲ್ಗೆ ಸೇರಿದ ಗಿಲ್ಬರ್ಟ್ ಶಾಫ್ಟ್ನ ಹಿಂಭಾಗದಲ್ಲಿ ಸೆಕ್ಯೂರಿಟಿ ಗಾರ್ಡ್ ಗಸ್ತು ಮಾಡುತ್ತಿದ್ದ ಸಂದರ್ಭದಲ್ಲಿ ಬಿಜಿಎಂಎಲ್ಗೆ ಸೇರಿದ ಗಿಫ್ಫಾರ್ಟ್ ಶಾಫ್ಟ್ ಕಾಂಪೌಂಡ್ಗೆ ಅಳವಡಿಸಿದ್ದ ಕಬ್ಬಿಣದ ಕಂಬಿಗಳಿಂದ ಕೂಡಿದ್ದ ಬೇಲಿಯನ್ನು ಕಿತ್ತು ಒಳಗೆ ಪ್ರವೇಶಿಸಿ ಗಿಫ್ಫಾರ್ಟ್ ಶಾಫ್ಟ್ನ ಹಿಂಭಾಗ ಬಿದ್ದಿರುವ ಚಿನ್ನ ಮಿಶ್ರಿತ ಮಣ್ಣನ್ನು ಕೊರೆದು ಮೂಟೆಗಳಲ್ಲಿ ತುಂಬಿಸಿಕೊಂಡು ಕಳ್ಳತನ ಮಾಡಿಕೊಂಡು ಹೋಗಿರುವುದು ಪತ್ತೆಯಾಗಿದ್ದು, ಕೂಡಲೇ ಎಂಟು ಆರೋಪಿಗಳನ್ನು ಹಿಡಿದು ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಾಜರುಪಡಿಸಿದ್ದಾರೆ.
ಈಗಾಗಲೇ ಚಿನ್ನದ ಗಣಿಗಳ ಪ್ರದೇಶದಲ್ಲಿ ಪೊಲೀಸರು ಪಹರೆಯನ್ನು ಬಿಗಿಗೊಳಿಸಲಾಗಿದ್ದು, ಇದರ ಜೊತೆಗೆ ಚಿನ್ನದ ಗಣಿಗಳ ಭದ್ರತಾ ಸಿಬ್ಬಂದಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ನಿಷೇಧಿತ ಚಿನ್ನದ ಗಣಿಗಳ ಪ್ರದೇಶದಲ್ಲಿ ಚಿನ್ನದ ಅದಿರು ಮಿಶ್ರಿತ ಮಣ್ಣನ್ನು ತೆಗೆಯಬಾರದೆಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
Leave feedback about this