Uncategorized

ಸ್ವಯಂ ಘೋಷಿತ ದೇವಮಾನವ ಚೈತನ್ಯಾನಂದ ಸರಸ್ವತಿಯ ಕಾಮಪುರಾಣಗಳು ಬಹಿರಂಗ.!

ದೆಹಲಿ:- ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದಂತೆ ದೆಹಲಿಯ ಸ್ವಯಂ ಘೋಷಿತ ದೇವಮಾನವ ಚೈತನ್ಯಾನಂದ ಸರಸ್ವತಿಯ ಹೆಜ್ಜೆ ಹೆಜ್ಜೆಗೂ ಕಾಮಪುರಾಣಗಳು ಬಹಿರಂಗವಾಗುತ್ತಿವೆ.

ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವುದಕ್ಕೆ ಚೈತನ್ಯಾನಂದ ಸರಸ್ವತಿಗೆ ಆತನ ಸಹಚರರ ಪೈಕಿ ಇದ್ದ ಮಹಿಳೆಯರೂ ಸಾಥ್ ನೀಡುತ್ತಿದ್ದರು ಎಂಬ ಆಘಾತಕಾರಿ ವಿಚಾರವೊಂದು ಇದೀಗ ಬಯಲಾಗಿದೆ. ಇದಕ್ಕೆ ಪೂರವಾಗುವ ಆಡಿಯೋಗಳನ್ನು ಕೂಡ ಸುದ್ದಿಸಂಸ್ಥೆಯೊಂದು ಬಹಿರಂಗಪಡಿಸಿದೆ.

ಚೈತನ್ಯಾನಂದ ಸರಸ್ವತಿ ಹೇಳಿದ ಮಹಿಳೆಯರನ್ನು ಹೋಟೆಲ್ ರೂಮ್‌ಗಳಿಗೆ ಹೋಗುವಂತೆ ಆತನ ಜೊತೆಗಿದ್ದ ಮಹಿಳೆಯರೇ ಒತ್ತಾಯಿಸುತ್ತಿದ್ದರು. ಈ ವೇಳೆ ಕೆಲವು ಮಹಿಳೆಯರು “ನನಗೆ ಋತುಸ್ರಾವವಾಗುತ್ತಿದೆ, ಚೈತನ್ಯಾನಂದರನ್ನು ಭೇಟಿ ಮಾಡುವ ಸ್ಥಿತಿಯಲ್ಲಿ ಇಲ್ಲ” ಎಂದು ಹೇಳುತ್ತಿದ್ದರೂ, ಕಾರಣ ಹೇಳಬೇಡಿ” ಎಂದು ದೇವಮಾನವನ ಆಪ್ತರು ಮಹಿಳೆಯರಿಗೆ ಬೆದರಿಕೆ ಹಾಕುತ್ತಿರುವುದು ಆಡಿಯೋದಲ್ಲಿ ದಾಖಲಾಗಿದೆ.

ಅಲ್ಲದೇ ಸ್ವಯಂ ಘೋಷಿತ ದೇವಮಾನವನ ಮನವಿಗೆ ಸ್ಪಂದಿಸದಿದ್ದರೆ ತಮ್ಮ ಶೈಕ್ಷಣಿಕ ದಾಖಲೆಗಳು ಮತ್ತು ಪದವಿಗಳನ್ನು ತಡೆಹಿಡಿಯಲಾಗುವುದು ಎಂದು ಮಹಿಳೆಯರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಚೈತನ್ಯಾನಂದ ಸರಸ್ವತಿ ಅರೆಸ್ಟ್:‌ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಸಂಬಂಧ 67 ವರ್ಷದ ಚೈತನ್ಯಾನಂದ ಸರಸ್ವತಿ ಎಂಬಾತನನ್ನು ಕಳೆದ ತಿಂಗಳು ಬಂಧಿಸಲಾಗಿದೆ. ಈತ ದೆಹಲಿಯ ಕುಂಜ್‌ನಲ್ಲಿರುವ ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್-ರಿಸರ್ಚ್‌ನ ಮುಖ್ಯಸ್ಥರಾಗಿದ್ದ.

ಸಂಸ್ಥೆಯ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆಘಾತಕಾರಿ ಆರೋಪಗಳು ಹೊರಬಿದ್ದ ಬೆನ್ನಲ್ಲೇ ಚೈತನ್ಯಾನಂದ ಸಹಿತ ಆತನೊಂದಿಗೆ ಸಂಸ್ಥೆಯ ಮಾಜಿ ಅಸೋಸಿಯೇಟ್ ಡೀನ್ ಶ್ವೇತಾ ಶರ್ಮಾ ಸೇರಿದಂತೆ ಅವರ ಮೂವರು ಮಹಿಳಾ ಸಹಾಯಕಿಯರನ್ನು ಸಹ ಬಂಧಿಸಲಾಗಿದೆ. ಮಹಿಳಾ ವಿದ್ಯಾರ್ಥಿಗಳನ್ನು ಹೋಟೆಲ್ ಕೋಣೆಗಳಲ್ಲಿ ಚೈತನ್ಯಾನಂದ ಅವರನ್ನು ಭೇಟಿ ಮಾಡಲು ಒತ್ತಾಯಿಸಿರುವ ಆರೋಪ ಈ ಶ್ವೇತಾ ಶರ್ಮಾ ಮೇಲಿದೆ.

ಪಂಚತಾರಾ ಹೋಟೆಲ್‌ಗಳಲ್ಲಿ ನೆಲೆಸುತ್ತಿದ್ದ ಈ ನಕಲಿ ದೇವಮಾನವ ಮತ್ತು ಆತನ ಸಹಾಯಕರು ಕೆಲ ಮಹಿಳೆಯರನ್ನು ಗುರುತಿಸಿ ಮನವೊಲಿಸುತ್ತಿದ್ದರು ಎಂದು ತಿಳಿದು ಬಂದಿದೆ. ಬಾಬಾ ನಿನಗಾಗಿ ಅದ್ಭುತವಾದ ಕೋಣೆಯನ್ನು ಕಾಯ್ದಿರಿಸಿದ್ದಾನೆ ಮತ್ತು ಅಲ್ಲಿ ಅವನೊಂದಿಗೆ ರಾತ್ರಿ ಕಳೆಯಬೇಕಾಗಿದೆ ಎಂದು ಹೇಳಿ ಮಹಿಳೆಯರನ್ನ ಪುಸಲಾಯಿಸಲಾಗುತ್ತಿದ್ದ ಎನ್ನಲಾಗಿದೆ.

ವಿದ್ಯಾರ್ಥಿಗಳನ್ನು ಚೈತನ್ಯಾನಂದರೊಂದಿಗೆ ಪ್ರವಾಸ ಹೋಗಲು ಒತ್ತಾಯಿಸಲಾಗುತಿತ್ತು, ಈ ವೇಳೆ ಆತನ ಸಹಚರ ಮಹಿಳೆಯರು ವಿದ್ಯಾರ್ಥಿಗಳು ಈ ರೀತಿಯಾಗಿ ಹೇಳುತ್ತಿದ್ದರಂತೆ. ಒಂದು ವೇಳೆ ವಿದ್ಯಾರ್ಥಿಗಳು ಇದಕ್ಕೆ ನಿರಾಕರಿಸಿದರೆ, ನಿಮ್ಮ ಹೋಟೆಲ್ ಬುಕಿಂಗ್ ನ್ನು ರದ್ದುಗೊಳಿಸಲಾಗುತ್ತದೆ ಮತ್ತು ನಿಮ್ಮದೇ ಸ್ವಂತ ವೆಚ್ಚದಲ್ಲಿ ಹೋಟೆಲ್ ಬುಕ್ ಮಾಡಬೇಕಾಗುತ್ತದೆ ಎಂದು ಬೆದರಿಕೆಯೊಡ್ಡಲಾಗುತ್ತಿತ್ತು ಎಂಬ ವಿಚಾರ ಬಯಲಾಗಿತ್ತು.

ಬಾಬಾನಿಂದ ಲೈಂಗಿಕ ಕಿರುಕುಳಕ್ಕೆ ಬಲಿಯಾದವರಲ್ಲಿ ಹೆಚ್ಚಿನವರು ಬಡ ಕುಟುಂಬಗಳ ಹಿನ್ನೆಲೆ ಹೊಂದಿದ್ದಾರೆ. ಇಂತಹ ಬೆದರಿಕೆಗಳಿಂದಾಗಿ ಮಹಿಳೆಯರು ಅಪಾರ ಒತ್ತಡ ಎದುರಿಸುತ್ತಿದ್ದರು. ಇನ್ನು ಈ ಹೇಳಿಕೆಗಳಲ್ಲಿ ಹಲವು ನಕಲಿ ಎಂದು ಶಂಕೆ ವ್ಯಕ್ತಪಡಿಸಿದರು ದೆಹಲಿ ಪೊಲೀಸ್ ಮೂಲಗಳು, ಅವುಗಳನ್ನು ಬಯಲು ಮಾಡಲು ಸಂಪೂರ್ಣ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video