ಚಿತ್ರದುರ್ಗ:- ಹೊರ ವಲಯದ ಗೋನೂರು ಬಳಿ ಅತ್ಯಾಚಾರಕ್ಕೀಡಾಗಿ ಕೊಲೆಯಾದ, ವ…ತಾ ತಾನಿದ್ದ ಹಾಸ್ಟೆಲ್ ನಿಂದ ಹೊರಗೆ ಹೋಗುತ್ತಿರುವ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದೇ 14 ರ ರಾತ್ರಿ 10.50 ರ ವೇಳೆಗೆ ವ…ತಾ ಹಾಸ್ಟೆಲ್ ನಿಂದ ಹೊರ ಹೋದವಳು ಮತ್ತೆ ಹಾಸ್ಟೆಲ್ ಗೆ ಬಂದಿಲ್ಲ. ಇಂತಹ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ವೈರಲ್ ಆಗಿದೆ.
ಇನ್ನೂ ಚಿತ್ರದುರ್ಗದ ಪ್ರಥಮ ವರ್ಷ ಪದವಿ ವಿದ್ಯಾರ್ಥಿನಿ 19-ವರ್ಷದ ವ…ತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮತ್ತಷ್ಟು ಸುಳಿವುಗಳು ಸಿಕ್ಕಿವೆ. ಚೇತನ್ ಎಂಬ ಯುವಕನನ್ನು ನಿನ್ನೆಯೇ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು ಅವನು ಕೊಲೆ ಮಾಡಿರೋದನ್ನು ಒಪ್ಪಿಕೊಂಡಿದ್ದಾನೆ. ಆಗಸ್ಟ್ 14 ರಂದು ಈ ಯುವತಿ ಮತ್ತು ಚೇತನ್ ರಸ್ತೆಯ ಮೇಲೆ ನಡೆದು ಹೋಗುತ್ತಿರುವುದು ಸಿಸಿಟಿವಿಯೊಂದರಲ್ಲಿ ಸೆರೆಯಾಗಿದೆ.
ಮುಂದೆ ನಡೆದು ಹೋಗುತ್ತಿರುವವನೇ ಚೇತನ್ ಮತ್ತು ಅವನನ್ನು ವ…ತಾ ಹಿಂಬಾಲಿಸುತ್ತಿದ್ದಾಳೆ. ಅವರಿಬ್ಬರು ದ್ವಿಚಕ್ರವಾಹನವೊಂದಕ್ಕೆ ಪೆಟ್ರೋಲ್ ಬಂಕೊಂದರಲ್ಲಿ ಇಂಧನ ತುಂಬಿಸಿಕೊಂಡಿರುವ ದೃಶ್ಯ ಕೂಡ ಅಲ್ಲಿನ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ. ಚೇತನ್ನ ಪೂರ್ವನಿಯೋಜಿತ ಸಂಚಿಗೆ ವ..ತಾ ಬಲಿಯಾಗಿರುವಳೆಂದು ಹೇಳಲಾಗುತ್ತಿದೆ.
Leave feedback about this