ಪುಣೆ:- ಸರಿಯಾಗಿ ಕೆಲಸ ಮಾಡು ಎಂದು ಹೇಳಿದ್ದಕ್ಕೆ ಕಾರ್ಕಳ ಮೂಲದ ಹೊಟೇಲ್ ಮಾಲೀಕನನ್ನು ಹೊಟೇಲ್ ಕಾರ್ಮಿಕ ಬರ್ಬರವಾಗಿ ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಹತ್ಯೆಯಾದವರು ಕಾರ್ಕಳ ತಾಲೂಕಿನ ಎಣ್ಣೆಹೊಳೆ ಕುಮೇರುಮನೆ ನಿವಾಸಿ ಸಂತೋಷ್ ಶೆಟ್ಟಿ (46) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಆರೋಪಿ ದಿಲೀಪ್ ಗಿರಿ ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹೊಟೇಲ್ ಸಂತೋಷ್ ಶೆಟ್ಟಿ ಆರೋಪಿ ದಿಲೀಪ್ ಗೆ “ಕೆಲಸ ಸರಿಯಾಗಿ ಮಾಡು” ಎಂದು ಪದೇ ಪದೇ ಸೂಚಿಸಿದ್ದರು. ಗಿರಿ ಇತ್ತೀಚೆಗಷ್ಟೆ ಕೆಲಸಕ್ಕೆ ಸೇರಿದ್ದ, ಅಲ್ಲದೆ ಸಂತೋಷ್ ಶೆಟ್ಟಿ ಅವರಿಂದ ಮುಂಗಡವಾಗಿ 2,500 ರೂ.ಗಳನ್ನು ಪಡೆದಿದ್ದರು. ಅದಾದ ನಂತರ, ದಿಲೀಪ್ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂದು ಹೇಳಲಾಗಿದೆ. ಆದರೆ ಶೆಟ್ಟಿ “ಮೊದಲು ಕೆಲಸ ಸರಿಯಾಗಿ ಮಾಡು” ಎಂದು ಎಚ್ಚರಿಸಿದರು.
ಕಳೆದ ಮಂಗಳವಾರ ರಾತ್ರಿ ಇಬ್ಬರ ನಡುವೆ ಸಣ್ಣ ಮಟ್ಟದ ಗಲಾಟೆ ನಡೆದಿದೆ. ಈ ವೇಳೆ ಆರೋಪ ಗಿರಿ ಹೋಟೆಲ್ ಅಡುಗೆಮನೆಯಿಂದ ಚಾಕು ತಂದು, ಶೆಟ್ಟಿಯ ಕುತ್ತಿಗೆಗೆ ಎರಡು ಬಾರಿ ಇರಿದ. ಈ ದಾಳಿಯಲ್ಲಿ ಶೆಟ್ಟಿ ಸಾವನ್ನಪ್ಪಿದರು. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಉಪ ಪೊಲೀಸ್ ಆಯುಕ್ತರು, ಸಹಾಯಕ ಪೊಲೀಸ್ ಆಯುಕ್ತರು ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಮೋಹನ್ ಖಂಡಾರೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಸಂತೋಷ್ ಶೆಟ್ಟಿ ಅವರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಹುಟ್ಟೂರು ಎಣ್ಣೆಹೊಳೆಗೆ ತರಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Leave feedback about this