ಬೆಂಗಳೂರು

ಸಂಚಾರಿ ಪೊಲೀಸರಿಂದ ಈಗ ಭರ್ಜರಿ ಡಿಸ್ಕೌಂಟ್‌

ಬೆಂಗಳೂರು:- ಜನರಿಗೆ ಸದ್ಯಕ್ಕೆ ಗುಡ್‌ನ್ಯೂಸ್ ಸಿಕ್ಕಿದೆ. ಹೌದು ಸಂಚಾರಿ ಪೊಲೀಸರು ಈಗ ಭರ್ಜರಿ ಡಿಸ್ಕೌಂಟ್‌ ಕೊಟ್ಟಿದ್ದಾರೆ.

ಅನೇಕ ಬಾರಿ ದಂಡ ಕಟ್ಟಿ ಎಂದು ಹೇಳಿದರೂ ಸಹ ಜನರು ಕಿವಿಗೆ ಹಾಕಿಕೊಳ್ಳುವುದಿಲ್ಲ. ಕೆಲವರ ಗಾಡಿಯನ್ನ ಚೆಕ್‌ ಮಾಡಿದರೆ 10 ಸಾವಿರ ರೂಪಾಯಿಗೂ ಹೆಚ್ಚು ದಂಡ ಇರುತ್ತದೆ. ಆದರೆ, ಇದ್ಯಾವುದಕ್ಕೂ ಜನ ತಲೆಕೆಡಿಸಿಕೊಂಡಿಲ್ಲ. ಹಾಗಾಗಿಯೇ ಪೊಲೀಸರು ಹೊಸ ಐಡಿಯಾ ಮಾಡಿದ್ದಾರೆ. ಸಾಮಾನ್ಯವಾಗಿ ಜನರಿಗೆ ಡಿಸ್ಕೌಂಟ್‌ ಎಂದರೆ ಬಹಳ ಇಷ್ಟ. ಹಾಗಾಗಿ ಡಿಸ್ಕೌಂಟ್‌ ಕೊಟ್ಟ ಮೇಲಾದರೂ ಜನ ದಂಡ ಕಟ್ಟಬಹುದು ಎನ್ನುವ ಕಾರಣಕ್ಕೆ ಪೊಲೀಸರು ಆಫರ್‌ ಕೊಟ್ಟಿದ್ದು, 50 ಪರ್ಸೆಂಟ್ ಡಿಸ್ಕೌಂಟ್ ಕೊಟ್ಟಿದ್ದಾರೆ. ಇದರಿಂದಾಗಿ ಆರಾಮವಾಗಿ ದಂಡ ಕಟ್ಟಬಹುದು.

ಬೆಂಗಳೂರು ಸಂಚಾರ ಪೊಲೀಸರು ಈ ಡಿಸ್ಕೌಂಟ್‌ ಕೊಟ್ಟಿದ್ದು, ಇದರಿಂದ ಜನರಿಗೆ ಬಹಳ ಸಹಾಯವಾಗಲಿದೆ. ಅನೇಕ ಬಾರಿ ಅನಿವಾರ್ಯ ಕಾರಣಗಳಿಂದ ಕೆಲವರು ಹೆಲ್ಮೆಟ್‌ ಬಿಟ್ಟು ಬಂದಿರುತ್ತಾರೆ ಅಥವಾ ತಿಳಿದೋ ತಿಳಿಯದೇ ಸಂಚಾರಿ ನಿಯಮಗಳನ್ನ ಪಾಲನೆ ಮಾಡಿರುವುದಿಲ್ಲ. ಈ ರೀತಿಯಾಗಿ ಗಾಡಿಯ ಮೇಲೆ ದಂಡ ಇರುವವರಿಗೆ ಈ ಡಿಸ್ಕೌಂಟ್‌ನಿಂದ ಉಪಯೋಗವಾಗಲಿದೆ. ಇನ್ನು ಆಗಸ್ಟ್ 23, 2025 ರಿಂದ ಸೆಪ್ಟೆಂಬರ್ 12, 2025 ರವರೆಗೆ ಈ ಡಿಸ್ಕೌಂಟ್‌ ಆಫರ್ ಲಭ್ಯವಿದ್ದು, ಇದನ್ನ ಉಪಯೋಗಿಸಿಕೊಂಡು ಗಾಡಿಯ ಮೇಲೆ ದಂಡ ಇರುವವರು ಫೈನ್‌ ಕಟ್ಟಬಹುದಾಗಿದೆ. ಇನ್ನು ಈ ಆಫರ್‌ ಕೇವಲ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನಡೆದ ಸಂಚಾರ ನಿಯಮ ಉಲ್ಲಂಘನೆಗಳಿಗೆ ಮಾತ್ರವಾಗಿದೆ.

ಇನ್ನು 50% ಡಿಸ್ಕೌಂಟ್‌ ಆಫರ್‌ ಟೃಆಫಿಕ್‌ ಸಿಗ್ನಲ್‌ ಉಲ್ಲಂಘನೆ ಮಾಡಿರುವವರಿಗೆ ಹಾಗೂ ಮಿತಿ ಮೀರಿದ ವೇಗದ ಚಾಲನೆ, ಹೆಲ್ಮೆಟ್ ಧರಿಸದೇ ಚಾಲನೆ ಮಾಡುವುದು, ಕಾರಿನಲ್ಲಿ ಸೀಟ್ ಬೆಲ್ಟ್ ಬಳಕೆ ಮಾಡದಿರುವುದು, ಗಾಡಿ ಚಾಲನೆ ಮಾಡುವಾಗ ಮೊಬೈಲ್‌ ಫೋನ್‌ ಬಳಕೆ ಮಾಡುವುದು ಹಾಗೂ ನೋ ಪಾರ್ಕಿಂಗ್‌ ಜಾಗದಲ್ಲಿ ಪಾರ್ಕ್‌ ಮಾಡುವುದು ಹೀಗೆ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದವರಿಗೆ ಈ ಡಿಸ್ಕೌಂಟ್‌ ಅನ್ವಯವಾಗುತ್ತದೆ.

ಇನ್ನು ಆಫರ್‌ ಮೂಲಕ ದಂಡ ಪಾವತಿ ಮಾಡಲು ಕರ್ನಾಟಕ ಒನ್ ವೆಬ್ ಸೈಟ್ ಹಾಗೂ ಪೇಟಿಎಂ ಬಳಕೆ ಮಾಡಬಹುದು, ಅಲ್ಲದೇ, ಹತ್ತಿರದ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ದಂಡ ಪಾವತಿ ಸಹ ಮಾಡಬಹುದಾಗಿದೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video