ಮಂಗಳೂರು:- ಪ್ರಪಂಚದ ಅನೇಕ ದೇಶಗಳಲ್ಲಿ, ವಿಶೇಷವಾಗಿ ಸೌದಿ ಅರೇಬಿಯಾದಲ್ಲಿ, ಫೆಬ್ರವರಿ 17 ರಂದು ಪವಿತ್ರ ರಂಜಾನ್ ತಿಂಗಳ ಚಂದ್ರ ಕಾಣಿಸಿಕೊಂಡಿದ್ದು, ಫೆಬ್ರವರಿ 18ರಿಂದ ಉಪವಾಸಗಳು ಆರಂಭವಾಗಿವೆ. ಮೆಕ್ಕಾ, ಮದೀನಾ ಸೇರಿದಂತೆ ಜಗತ್ತಿನಾದ್ಯಂತ ಇಸ್ಲಾಂ ಧರ್ಮದವರು ತಮ್ಮ ಸ್ಥಳೀಯ ಮಸೀದಿಗಳಲ್ಲಿ (ತರಾವೀಹ್) ಪ್ರಾರ್ಥನೆಗಳಿಂದ ಈ ಮಾಸವನ್ನು ಆಚರಿಸಲು ಪ್ರಾರಂಭಿಸಿದ್ದಾರೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸದ ವೃತ ಮಾಡುತ್ತಾರೆ, ಆಧ್ಯಾತ್ಮಿಕ ಮತ್ತು ಧಾರ್ಮಿಕ ಪ್ರವಚನದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಇಫ್ತಾರಿ ಮತ್ತು ಸೆಹ್ರಿಯಲ್ಲಿ ಭಾಗವಹಿಸುತ್ತಾರೆ.
ಫೆಬ್ರವರಿ 18, 2026 ರಂದು ಬುಧವಾರ ಸಂಜೆ 6:15ರಿಂದ 6:45ರ ನಡುವೆ ಭಾರತದ ಹಲವಾರು ಪ್ರದೇಶಗಳಲ್ಲಿ ಚಂದ್ರ ಗೋಚರಿದೆ.
ಚಂದ್ರನನ್ನು ವೀಕ್ಷಿಸಿ ಭಾರತದಲ್ಲಿ ಉಪವಾಸದ ಮೊದಲ ದಿನ ಫೆಬ್ರವರಿ 19 ಗುರುವಾರ ಆರಂಭವಾಗಿದೆ.
ಈ ಸಮಯದಲ್ಲಿ ಅಲ್ಲಾಹನಲ್ಲಿ ಪ್ರಾರ್ಥನೆ ಮಾಡುವುದರಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ ಎಂದು ಭಾವಿಸಲಾಗುತ್ತದೆ. ಜನರು ರಂಝಾನ್ ತಿಂಗಳಲ್ಲಿ ಅಲ್ಲಾಹನ ಕೃಪೆ ಪಡೆಯಲು ಮತ್ತು ದಿನವಿಡೀ ವೃತ ಆಚರಿಸುವ ಮೂಲಕ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಕಾತುರರಾಗಿರುತ್ತಾರೆ. ಇಷ್ಟೇ ಅಲ್ಲದೆ ತಿಂಗಳು ಪೂರ್ತಿ, ಅವರು ಸ್ವಯಂ ನಿಯಂತ್ರಣವನ್ನು ಕಾಪಾಡಿಕೊಳ್ಳಲು, ತಿನ್ನುವುದು ಮತ್ತು ಧೂಮಪಾನದಂತಹ ಎಲ್ಲಾ ವ್ಯಸನಗಳಿಂದ ದೂರವಿರಲು ನಿರಂತರವಾಗಿ ಪ್ರಾರ್ಥನೆಯಲ್ಲಿ ತೊಡಗಿಕೊಳ್ಳುತ್ತಾರೆ.
ಬೆಳಗಿನ ಜಾವದ ಸಮಯದಲ್ಲಿ, ಜನರು ಸೂರ್ಯೋದಯಕ್ಕೆ ಮುಂಚೆ ಎದ್ದು ಆಹಾರ ಪದಾರ್ಥ ಸೇವಿಸುತ್ತಾರೆ. ಸಂಜೆಯ ಸೂರ್ಯಾಸ್ತದ ಸಮಯದಲ್ಲಿ ಜನರು ಉಪವಾಸ ಮುರಿಯುತ್ತಾರೆ. ವಿವಿಧ ರೀತಿಯ ಆಹಾರ ಮತ್ತು ಪಾನೀಯಗಳನ್ನು ತಯಾರಿಸಿದ ನಂತರ ಅವುಗಳನ್ನು ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ತಿನ್ನುತ್ತಾರೆ. ಈ ಸಮಯದಲ್ಲಿ, ಎಲ್ಲಾ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಸಂಬಂಧಿಕರು ತಮ್ಮ ಅಂದಿನ ವೃತ ಮುರಿಯಲು ಒಟ್ಟುಗೂಡುತ್ತಾರೆ.
Leave feedback about this