ಬಳ್ಳಾರಿ:- ಯೂಟ್ಯೂಬರ್ ಸಮೀರ್ ಎಂ.ಡಿ. ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿರುವ ಆರೋಪ ಎದುರಿಸುತ್ತಿದ್ದಾನೆ. ಯೂಟ್ಯೂಬ್ನಲ್ಲಿ ಎಐ ವಿಡಿಯೋ ಮಾಡಿ ಸಾಲು ಸಾಲು ಆರೋಪ ಮಾಡಿದ ಯೂಟ್ಯೂಬರ್, ಅದೇ ದೂತ ಸಮೀರ್ ಎಂ.ಡಿಯನ್ನ ಬೆಳ್ತಂಗಡಿ ಪೊಲೀಸರು ವಿಚಾರಣೆ ಮೇಲೆ ವಿಚಾರಣೆ ಮಾಡಿದ್ದಾರೆ.
ಇದೀಗ ಸಮೀರ್ ಯೂಟ್ಯೂಬ್ನಲ್ಲಿ ಮತ್ತೊಂದು ವಿಡಿಯೋ ಹಾಕಿದ್ದು, ನನ್ನ ಜೊತೆಯಲ್ಲಿದ್ದವರೇ ಉಲ್ಟಾ ಹೊಡೆದಿದ್ದಾರೆ ಎಂದು ಹೇಳಿದ್ದಾರೆ.
ಧರ್ಮಸ್ಥಳ ತಲೆ ಬುರುಡೆ ಕೇಸ್ ಬಗ್ಗೆ ಎಐ ವಿಡಿಯೋ ಮಾಡಿ, ಕಣ್ಣಿಗೆ ಕಟ್ಟಿದಂತೆ ವಿವರಿಸಿದ್ದ ಸಮೀರ್ ಎಂಡಿಯನ್ನು ಬೆಳ್ತಂಗಡಿ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅದೇ ಸಮೀರ್ ಹೊಸದಾಗಿ ಮತ್ತೊಂದು ವಿಡಿಯೋ ಮಾಡಿದ್ದಾನೆ. ನನಗೆ ಇರೋದಕ್ಕೆ ಮನೆ ಇಲ್ಲ ಎಂದಿರುವ ಸಮೀರ್, ಪೊಲೀಸ್ ವಿಚಾರಣೆ ಬಳಿಕ ನನಗೆ ಬಾಡಿಗೆ ಮನೆ ಸಿಗ್ತಿಲ್ಲ ಅಂತ ಅಳಲು ತೋಡಿಕೊಂಡಿದ್ದಾನೆ.
ಪ್ರಾಮಾಣಿಕವಾಗಿ ಹೇಳ್ತಿದ್ದೇನೆ, ಇವತ್ತು ನನಗೆ ಮನೆ ಇಲ್ಲ ಅಂತ ಸಮೀರ್ ಹೇಳಿದ್ದಾರೆ. ಯಾವುದೋ ಪುಟ್ಟ ಬಾಡಿಗೆ ಮನೆಯಲ್ಲಿದ್ವಿ. ಆದ್ರೆ ಪೊಲೀಸರು ತನಿಖೆಗೆ ಅಂತಾ ಮನೆಗೆ ಬಂದರು. ಇದಾದ ನಂತರ ಮನೆಯ ಓನರ್ ನಮ್ಮನ್ನ ಮನೆಯಿಂದ ಖಾಲಿ ಮಾಡಿಸಿದ್ದಾರೆ. ಇವತ್ತು ಸಮೀರ್ ಎಂಡಿ ಅಂದರೆ ಯಾರೂ ಮನೆ ಕೊಡ್ತಿಲ್ಲ ಎಂದು ಬೇಸರ ತೋಡಿಕೊಂಡಿದ್ದಾನೆ.
ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿ ತನಿಖೆಗೆ ಒಳಗಾಗಿರುವ ಯೂಟ್ಯೂಬರ್ ಸಮೀರ್ ಎಂಡಿ, ವಿಚಾರಣೆ ಬಳಿಕ ಇದೇ ಮೊದಲ ಹೊಸ ವಿಡಿಯೋ ಮಾಡಿದ್ದಾನೆ. ಧರ್ಮಸ್ಥಳ ತಲೆ ಬುರುಡೆ ಕೇಸ್, ಪೊಲೀಸ್ ವಿಚಾರಣೆ, ಸುಜಾತ ಭಟ್ ಕೇಸ್, ಬಾಡಿಗೆ ಮನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಮೀರ್ ಮಾತನಾಡಿದ್ದಾನೆ.
‘ನನಗೆ ವಿದೇಶದಿಂದ ಫಂಡ್ ಬಂದಿದೆ ಎಂದು ಆರೋಪ ಮಾಡುತ್ತಿದ್ದಾರೆ. ನನಗೆ ಯಾವುದೇ ಫಂಡ್ ಬಂದಿಲ್ಲ. ಹಣ ತಗೊಂಡಿದ್ದರೆ ತನಿಖೆಯಿಂದ ಎಲ್ಲಾ ಹೊರಗೆ ಬರ್ತಿತ್ತು. ಪೊಲೀಸರಿಗೆ ಎಲ್ಲಾ ಬ್ಯಾಂಕ್ ದಾಖಲೆ ನೀಡಿದ್ದೇನೆ. ಪೊಲೀಸರು ತನಿಖೆ ಮಾಡಲಿ, ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡುವವರನ್ನ ಯಾರೂ ಪ್ರಶ್ನೆ ಮಾಡಲ್ಲ’ ಎಂದು ಸಮೀರ್ ಹೇಳಿದ್ದಾರೆ.
‘ಆ ಸುಜಾತ ಭಟ್ ತಾಯಿಯ ಕಣ್ಣೀರನ್ನ ನೋಡಿ ವಿಡಿಯೋ ಮಾಡಿದ್ದೆ. ಸುಜಾತ ಭಟ್ರ ಇಂಟರ್ವೀವ್ ನೋಡಿ ಕಣ್ಣೀರು ನೋಡಿ ಅದರ ಬಗ್ಗೆ ವಿಡಿಯೋ ಮಾಡಿದ್ದೆ. ಈಗ ಆ ಕಣ್ಣೀರೇ ಸುಳ್ಳು ಅಂದ್ರೆ ನಾನು ಏನು ಮಾಡಲಿ? ನನ್ನ ವಿಡಿಯೋ ಸುಳ್ಳು ಅಂತ ಹೇಳುತ್ತಿದ್ದಾರೆ. ಪೊಲೀಸರ ಯುಡಿಆರ್ ರಿಪೋರ್ಟ್ ಸುಳ್ಳಾ? ಸೌಜನ್ಯಾ, ಪದ್ಮಾಲತಾರನ್ನ ಸಾಯಿಸಿದ್ದು ಯಾರು?’ ಎಂದು ಪ್ರಶ್ನೆ ಮಾಡಿದ್ದಾರೆ.
ನನ್ನ ವಿಡಿಯೋ ಸುಳ್ಳು ಅಂತ ಹೇಳುತ್ತಿದ್ದಾರೆ. ಪೊಲೀಸರ ಯುಡಿಆರ್ ರಿಪೋರ್ಟ್ ಸುಳ್ಳಾ? ಸೌಜನ್ಯಾ, ಪದ್ಮಾಲತಾರನ್ನು ಸಾಯಿಸಿದ್ದು ಯಾರು? ಎಂದು ಸಮೀರ್ ಪ್ರಶ್ನಿಸಿದ್ದಾರೆ. ಯಾವಾಗಲೂ ಸ್ಟುಡಿಯೋದಲ್ಲಿ ಕ್ಯಾಮರಾ ಮುಂದೆ ಕೂತ್ಕೊಂಡು ವಿಡಿಯೋ ಮಾಡ್ತಿದ್ದೆ. ಆದರೆ, ಇವತ್ತು ಕಾರಲ್ಲಿ ಕೂತ್ಕೊಂಡು ವಿಡಿಯೋ ಮಾಡ್ತಿದ್ದೇನೆ ಅಂತ ಸಮೀರ್ ಕಾರಿನಲ್ಲಿ ಕುಳಿತು ಹೇಳಿದ್ದಾನೆ. ಇನ್ನು ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡಿದ ಆರೋಪ ಎದುರಿಸುತ್ತಿರುವವರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಯುಟ್ಯೂಬರ್ ಸಮೀರ್, ಮ್ಯಾಜಿಕ್ ಅಜ್ಜಿ ಸುಜಾತ್ ಭಟ್, ಬುರುಡೆ ಮ್ಯಾನ್ ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ವಿರುದ್ಧ ದೂರು ದಾಖಲಾಗಿದೆ.
Leave feedback about this