ಬಳ್ಳಾರಿ

ದಸರಾವನ್ನು ಮುಸ್ಲಿಮರು ಉದ್ಘಾಟಿಸಬಾರದು ಎಂದು ಸಂವಿಧಾನದಲ್ಲೇನಾದರೂ ಬರೆದಿದ್ದೀಯಾ.- ಲಾಡ್

ಬಳ್ಳಾರಿ:- ಈ ಬಾರಿಯ ಮೈಸೂರು ದಸರಾ ಮಹೋತ್ಸವವನ್ನು ಪ್ರತಿಷ್ಠಿತ ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌ ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸಿದ ಬೆನ್ನಲ್ಲೇ ಬಿಜೆಪಿಯ ಹಲವು ನಾಯಕರಿಂದ ಭಾರೀ ವಿರೋಧ ವ್ಯಕ್ತವಾಗಿದೆ.

ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಿದ ಸಚಿವ ಸಂತೋಷ್‌ ಲಾಡ್‌ ಅವರು ದಸರಾವನ್ನು ಉದ್ಘಾಟಿಸಬಾರದು ಎಂದು ಸಂವಿಧಾನದಲ್ಲೇನಾದರೂ ಬರೆದಿದ್ದೀಯಾ?ಎಂದು ಟಾಂಗ್‌ ಕೊಟ್ಟರು. ಎಲ್ಲದಕ್ಕೂ ಈ ರೀತಿಯ ಅಡ್ಡಗಾಲು ಹಾಕುತ್ತಾರೆ ಎಂದು ಕಿಡಿಕಾರಿದ ಸಂತೋಷ್‌ ಲಾಡ್‌ ಇವತ್ತು ದೇಶದ ಅತಿ ದೊಡ್ಡ ದಾನಿ ಯಾರು? ಆಜಿಮ್‌ ಪ್ರೇಮ್‌ಜಿ ಅವರು ಯಾವ ಸಮಾಜದವರು? ಅವರು ಬಡವರಿಗಾಗಿ ಎರಡೂವರೆ ಲಕ್ಷ ಕೋಟಿ ದಾನ ಮಾಡಿದ್ದಾರೆ ಎಂದರು.

ಸಂವಿಧಾನದಲ್ಲಿ ಆ ರೀತಿ ಏನೂ ಇಲ್ಲ, ಸರ್ಕಾರ ತೀರ್ಮಾನ ಮಾಡಿದ ಮೇಲೆ ಅದನ್ನು ಸ್ವಾಗತಿಸಬೇಕು ಎಂದು ಸಂತೋಷ್‌ ಲಾಡ್‌ ಕಿಡಿಕಾರಿದರು.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video