ಹಾವೇರಿ

ಡಿಜೆಗಾಗಿ ಪಟ್ಟು: ವಿಸರ್ಜನೆಯಾಗದ ಗಣೇಶ

ಹಾವೇರಿ:- ರಾಜ್ಯದ ಎಲ್ಲೆಡೆಗಳಲ್ಲಿ ಈಗ ಗಣೇಶ ವಿಸರ್ಜನೆ ಮುಕ್ತಾಯಗೊಂಡಿವೆ. ಆದರೆ, ಜಿಲ್ಲೆಯ ಬಂಕಾಪುರ ಹಿಂದೂ ಮಹಾಸಭಾ ಗಣಪತಿ ಡಿಜೆ ಅವಕಾಶ ನೀಡದ ಹಿನ್ನಲೆ, 43 ದಿನಗಳು ಕಳೆದರೂ ವಿಸರ್ಜನೆ ಮಾಡಲಿಲ್ಲ. ಇದರಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಗಣೇಶ ಸಮಿತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಇಲಾಖೆಗೆ ನಮಗೆ ಅನುಮತಿ ‌ನೀಡಬೇಕು. ಇಲ್ಲಾದರೆ ಗಣಪತಿ ವಿಸರ್ಜನೆ ಮಾಡುವುದಿಲ್ಲ, 42 ವರ್ಷಗಳಿಂದ ಗಣಪತಿ ಪ್ರತಿಷ್ಠಾಪನೆ ಮಾಡಿಕೊಂಡು ಬರುತ್ತಿದ್ದೇವೆ. ಯಾವುದೇ ಗದ್ದಲ, ಗಲಾಟೆ ಆಗಿಲ್ಲ. ಈ ವರ್ಷ ಮಾತ್ರ ಹಿಂದೂ‌ ಮಹಾಸಭಾ ಗಣಪತಿ ಅಂದರೆ ಎಲ್ಲಾ ಕಾನೂನು ಬರುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಪ್ರಸಿದ್ದ ಮೂರ್ತಿಗಳಲ್ಲಿ ಒಂದಾದ, ಬಂಕಾಪುರದ ಹಿಂದೂ ಮಹಾಸಭಾ ಗಣಪತಿ ಮೂರ್ತಿ ವಿಸರ್ಜನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ವಿಸರ್ಜನೆ ಸಂದರ್ಭದಲ್ಲಿ ಡಿಜೆ ವಿಚಾರವಾಗಿ ಹಲವು ದಿನಗಳಿಂದ ಚರ್ಚೆ ನಡೆಯುತ್ತಿದೆ. ಆದರೆ, ಪೊಲೀಸರು ಡಿಜೆಗೆ ಅವಕಾಶವಿಲ್ಲವೆಂದು ಹೇಳುತ್ತಿದ್ದಾರೆ.

ಇನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಯಾಸೀರ ಅಹ್ಮದ್ ಖಾನ್‌ ಪಠಾಣ ಸಹ ಭೇಟಿ ನೀಡಿದ್ದರು. ಈ ವೇಳೆ ನಮಗೆ ಡಿಜೆಗೆ ಅನುಮತಿ ಕೊಡಿಸಿ ಎಂದು ಒತ್ತಾಯಿಸಿದ್ದರು. ಆದರೆ, ಯಾರೊಬ್ಬರೂ ಡಿಜೆಗೆ ಅನುಮತಿ‌ ಕೊಡಿಸದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೇ ಪೆಂಡಾಲ್ ಹಾಕಿದ ವ್ಯಕ್ತಿಗೆ ಪೆಂಡಾಲ್ ತೆಗೆಯುವಂತೆ ಒತ್ತಾಯಿಸಲಾಗಿದೆ.

ಒಟ್ಟಿನಲ್ಲಿ ಬಂಕಾಪುರ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ ಮಾಡಿ, 43 ದಿನ ಕಳೆದರೂ ವಿಸರ್ಜನೆಗೆ ‌ಮುಂದಾಗಿಲ್ಲ. ಈಗ ಡಿಜೆಗಾಗಿ‌ ಗಣೇಶ್ ಉತ್ಸವ ಸಮಿತಿ ಬಿಗಿಪಟ್ಟು ಹಿಡಿದು ಕುಳಿತಿದೆ. ಗಣಪತಿ ವಿಸರ್ಜನೆ ಯಾವಾಗ ಮಾಡುತ್ತಾರೆ ಅನ್ನೋದು ಕಾದು ನೋಡಬೇಕಾಗಿದೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video