ಬೆಂಗಳೂರು

ಕೆಯುಡಬ್ಲ್ಯೂಜೆ ಬೆಂಗಳೂರು ನಗರ ಘಟಕ ಚುನಾವಣೆಯಲ್ಲಿ, ಬಿರುಸಿನ ಮತದಾನ

ಬೆಂಗಳೂರು ಡೆಸ್ಕ್:- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಬೆಂಗಳೂರು ಘಟಕದ ಆಡಳಿತ ಮಂಡಳಿ ಆಯ್ಕೆಗೆ ಇಂದು ಬಿರುಸಿನ ಮತದಾನ ನಡೆಯಿತು. ನ್ಯಾಯಲಯದ ಆದೇಶದ ಮೇರೆಗೆ ಚುನಾವಣೆಯು ನಡೆಯುತ್ತಿದ್ದು,
ಬೆಳಗ್ಗೆ 9 ಗಂಟೆಗೆ ಕಂದಾಯ ಭವನದ ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ಮತದಾನ ಆರಂಭಗೊಂಡು ಪತ್ರಕರ್ತ ಸದಸ್ಯರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡರು.

ರಾಜ್ಯ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಖಜಾಂಚಿ ವಾಸುದೇವ ಹೊಳ್ಳ, ಮಾಜಿ ಅಧ್ಯಕ್ಷರುಗಳಾದ ಬಿ.ವಿ.ಮಲ್ಲಿಕಾರ್ಜುನಯ್ಯ, ವಿ.ವೆಂಕಟೇಶ್, ವಿಜಯವಾಣಿ ಸಂಪಾದಕರಾದ ಕೆ.ಎನ್.ಚನ್ನೇಗೌಡ ಅವರು ಸೇರಿದಂತೆ ಹಲವರು ಮತ ಚಲಾವಣೆ ಮಾಡಿದರು.

ಹಿರಿಯ ಪತ್ರಕರ್ತರೂ, ಕೆಯುಡಬ್ಲ್ಯೂಜೆ ರಾಜ್ಯ ಮುಖ್ಯ ಚುನಾವಣಾಧಿಕಾರಿಯಾದ ಎನ್.ರವಿಕುಮಾರ್ ಅವರ ಉಸ್ತುವಾರಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ನಂಜುಂಡಪ್ಪ ವಿ ಅವರು ಮತದಾನ ಪ್ರಕ್ರಿಯೆ ನಡೆಸಿದರು.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video