ಮುಂಬೈ:- ಆಮಿರ್ ಖಾನ್ ಕುರಿತು ಕಳೆದ ಕೆಲ ದಿನಗಳಿಂದ ಸುಳ್ಳು ಸುದ್ದಿಯೊಂದು ಚಾಲ್ತಿಯಲ್ಲಿದೆ. ರಜನಿಕಾಂತ್ ಅಭಿನಯದ ”ಕೂಲಿ” ಚಿತ್ರಕ್ಕೆ ಸಂಬಂಧಿಸಿದ ಸುದ್ದಿ ಅದು. ”ಕೂಲಿ” ಚಿತ್ರದಲ್ಲಿ ಆಕ್ಟ್ ಮಾಡಿ ತಪ್ಪು ಮಾಡಿದೆ ಎಂದು ಆಮೀರ್ ಹೇಳಿದ್ದಾರೆ ಎಂದು ಕೆಲವರು ಪುಕಾರು ಹಬ್ಬಿಸಿದ್ದಾರೆ.
ಆದರೆ, ವಾಸ್ತವದಲ್ಲಿ ಆಮಿರ್ ಖಾನ್ ಹಾಗೇ ಹೇಳಿಯೇ ಇಲ್ಲ. ಖುದ್ದು ಆಮಿರ್ ಖಾನ್ ತಂಡ ಈ ಕುರಿತು ಸ್ಪಷ್ಟನೆಯನ್ನು ಕೂಡ ನೀಡಿದೆ. ಆದರೂ ಕೂಡ ಹಲವರು ಈ ವಿಚಾರ ಒಪ್ಪಲು ತಯಾರಿಲ್ಲ. ಬದಲಿಗೆ ಆಮಿರ್ ಖಾನ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಹೀಗಿರುವಾಗ ಇದೀಗ ಆಮಿರ್ ಖಾನ್ ಅವರ ಹೊಸ ಪ್ರೇಯಸಿ ಗೌರಿ ಆತುರಾತುರವಾಗಿ ಆಮಿರ್ ಖಾನ್ ಮನೆಗೆ ಬಂದಿದ್ದಾರೆ ಎನ್ನಲಾಗಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಷ್ಟಕ್ಕೂ ಗೌರಿ ಏಕಾಏಕಿ ಆಮಿರ್ ಖಾನ್ ಮನೆಗೆ ಬಂದಿದ್ದೇಕೆ ಎನ್ನುವ ಪ್ರಶ್ನೆಗೆ ಸದ್ಯ ಉತ್ತರ ಇಲ್ಲವಾದರೂ ಕೂಡ ಹಲವರು ”ಕೂಲಿ” ಕುರಿತು ಹರಿಬಿಡಲಾದ ಸುಳ್ಳು ಸುದ್ದಿಯ ಕುರಿತು ಚರ್ಚೆ ಮಾಡಲು ಆಮಿರ್ ಮನೆಗೆ ಗೌರಿ ಬಂದಿರಬಹುದು ಎಂದು ಚರ್ಚೆ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಮಿರ್ ಖಾನ್ ಮನೆಗೆ ಗೌರಿ ಬಂದಿರುವ ವಿಡಿಯೋವನ್ನು ಕೂಡ ವೈರಲ್ ಮಾಡುತ್ತಿದ್ದಾರೆ.
ಅಂದ್ಹಾಗೇ ”ಕೂಲಿ” ಚಿತ್ರಕ್ಕೆ ಸಂಬಂಧಿಸಿದಂತೆ ಆಮಿರ್ ಖಾನ್ ತಂಡ ಪ್ರತಿಕ್ರಿಯೆಯನ್ನು ನೀಡಿದ್ದು, ಆಮಿರ್ ಖಾನ್ ಇನ್ನೂ ಚಿತ್ರವನ್ನು ನೋಡಿಲ್ಲ.. ಚಿತ್ರದ ಕುರಿತು ಯಾವುದೇ ಪ್ರತಿಕ್ರಿಯೆಯನ್ನು ಕೂಡ ನೀಡಿಲ್ಲ.. ಎಂದು ಹೇಳಿದೆ. ಹರಡಿರುವ ಸುಳ್ಳು ಸುದ್ದಿಯನ್ನು ನಂಬದಂತೆ ಮನವಿಯನ್ನು ಕೂಡ ಮಾಡಿಕೊಂಡಿದೆ. ಸದ್ಯದಲ್ಲೇ ”ಕೂಲಿ” ಚಿತ್ರವನ್ನು ಆಮಿರ್ ಖಾನ್ ನೋಡಲಿದ್ದಾರೆ ಎಂದು ಸ್ಪಷ್ಟನೆಯನ್ನು ಕೂಡ ನೀಡಿದೆ.
Leave feedback about this