ಬೆಂಗಳೂರು:- ಕನ್ನಡದ ಹಿರಿಯ ನಟನ ಹರೀಶ್ ರಾಯ್ ಅವರು ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ತುಂಬಾನೇ ಹದಗೆಟ್ಟಿದೆ, ಅವರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಥೈರಾಯ್ಡ್ ಕ್ಯಾನ್ಸರ್ನಿಂದ ಅವರು ಬಳಲುತ್ತಿದ್ದು, ಹೊಟ್ಟೆ ಹಾಗೂ ಕಾಲಿನ ಭಾಗಕ್ಕೆ ನೀರು ತುಂಬಿದೆ.
‘ಕೆಜಿಎಫ್’ ಚಿತ್ರದಲ್ಲಿ ಚಾಚಾ ಹೆಸರಿನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ರಾಕಿ ಭಾಯ್ ಆಪ್ತ ವಲಯದಲ್ಲಿ ಈ ಚಾಚಾ ಕೂಡ ಇದ್ದರು. ಹಲವು ಸಮಯ ಕಾಲ ಇವರು ಒಟ್ಟಾಗಿ ಶೂಟಿಂಗ್ ಮಾಡಿದ್ದರಿಂದ ಇವರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. 2024ರಲ್ಲಿ ಹರೀಶ್ ರಾಯ್ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಯಶ್ ಬಗ್ಗೆ ಅವರು ಮಾತನಾಡಿದ್ದರು.
‘ಯಶ್ ಬಗ್ಗೆ ನಾನು ಮಾತನಾಡದೇ ಇನ್ಯಾರು ಮಾತಾಡ್ತಾರೆ, ನನ್ನ ಯಶ್ ನನಗೆ ಕರೆ ಮಾಡಿ ವಿಚಾರಿಸಿದರು. ನಾನು ಹಣ ಹಾಕ್ತೀನಿ ನೀವು ತಲೆಕೆಡಿಸಿಕೊಳ್ಳಬೇಡಿ ಎಂದರು. ಹಣ ಬೇಡ ಎಂದೆ, ಇಲ್ಲ ಹಾಕ್ತೀನಿ ಎಂದರು. ನನ್ನ ಪತ್ನಿ ಬಳಿ ಮಾತನಾಡಿ ಹಣ ಕೊಡ್ತೀನಿ ಎಂದರು. ಬೇಡ ಎಂದು ಸಾಕಷ್ಟು ಕೇಳಿಕೊಂಡ ಬಳಿಕ ಅವರು ಓಕೆ ಎಂದರು’ ಎಂದು ಹರೀಶ್ ರಾಯ್ ಹೇಳಿದ್ದಾರೆ.
ಯಶ್ನ ಫೋನ್ ಅಲ್ಲಿ ಯಾರಿಗಾದ್ರೂ ಮಾತನಾಡಿಸೋಕೆ ಆಗುತ್ತಾ, ನಾನು ಮೆಸೇಜ್ ಹಾಕಿದ್ರೆ ಸಾಕು ಕಾಲ್ ಮಾಡ್ತಾರೆ. ಯಜಮಾನರು ಹೃದಯಕ್ಕೆ ಹತ್ತಿರವಾದವರು. ಕೋಟಿ ಖರ್ಚಾದರೂ ಉಳಿಸಿಕೊಳ್ತೀನಿ ಎಂದು ಹೇಳಿದ್ದಾರೆ. ದರ್ಶನ್ ಹಾಗೂ ಯಶ್ ಜೋಡೆತ್ತು. ನನ್ನ ಬತ್ತಳಿಕೆಯಲ್ಲಿ ಅವರಿಬ್ಬರು ಇದ್ದಾರೆ ಎಂಬ ನಂಬಿಕೆ ನನಗಿದೆ’ ಎಂದು ಈ ಮೊದಲು ಹರೀಶ್ ರಾಯ್ ಹೇಳಿದ್ದರು.
ಅವಕಾಶ ಕಡಿಮೆ ಆಗಬಹುದು ಎಂಬ ಭಯಕ್ಕೆ ಹರೀಶ್ ರಾಯ್ ಅವರು ತಮಗೆ ಕ್ಯಾನ್ಸರ್ ಬಂದ ವಿಚಾರವನ್ನು ಎಲ್ಲಿಯೂ ಹೇಳಿರಲಿಲ್ಲ. ಆದರೆ, ನಂತರ ಅವರು ಈ ವಿಚಾರ ಹೇಳಲೇಬೇಕಾದ ಪರಿಸ್ಥಿತಿ ಬಂತು.
Leave feedback about this