Uncategorized

ಏಷ್ಯಾ ಕಪ್‌ 2025 ಟೂರ್ನಿ ನಾಳೆಯಿಂದ ಆರಂಭ

ದುಬೈ:- ಏಷ್ಯಾ ಕಪ್‌ 2025 ಟೂರ್ನಿಯೂ ನಾಳೆಯಿಂದ (ಸೆಪ್ಟೆಂಬರ್‌ 9) ಆರಂಭವಾಗಲಿದೆ. 8 ತಂಡಗಳು ಟ್ರೋಫಿಗಾಗಿ ಸೆಣಸಾಡಲಿದ್ದು, ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಟೂರ್ನಿಯು ರೌಂಡ್‌ ರಾಬಿನ್‌ ಮಾದರಿಯಲ್ಲಿ ನಡೆಯಲಿದೆ. ಇದಾದ ಬಳಿಕ ಲೀಗ್‌ನಲ್ಲಿ 2 ಪಂದ್ಯ ಗೆದ್ದ ತಂಡವು ಸೂಪರ್‌ 4 ಹಂತಕ್ಕೆ ತಲುಪಲಿದೆ. ಫೈನಲ್‌ ಪಂದ್ಯವು ಸೆಪ್ಟೆಂಬರ್‌ 28ರಂದು ದುಬೈನಲ್ಲಿ ನಡೆಯಲಿದ್ದು, ಈ ಬಾರಿ ಟೂರ್ನಿಯು ಸಂಪೂರ್ಣವಾಗಿ UAE ಮತ್ತು ದುಬೈನ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಲಿದೆ.

ಸೂಪರ್‌ 4 ರೌಂಡ್:‌ ಇನ್ನು, ಲೀಗ್‌ ಹಂತದಲ್ಲಿ 4 ತಂಡಗಳು ಇರಲಿದ್ದು, ಇದರಲ್ಲಿ 2 ಪಂದ್ಯವನ್ನು ಗೆದ್ದ ತಂಡವು ನೇರವಾಗಿ ಸೂಪರ್‌ 4 ಹಂತಕ್ಕೆ ತಲುಪಲಿದೆ. ಆದರೆ ಸೂಪರ್‌ 4 ಹಂತಕ್ಕೆ ತಲುಪಿದ ಮೇಲೆ ಯಾವುದೇ ಗುಂಪುಗಳು ಇರುವುದಿಲ್ಲ. ಬದಲಿಗೆ 4 ತಂಡಗಳಲ್ಲಿ ಪ್ರತಿ ತಂಡ ಸಹ ಉಳಿದ 3 ತಂಡಗಳ ವಿರುದ್ಧ ಸೆಣಸಾಡಲೇ ಬೇಕು. ಹೀಗಾಗಿ ಏಷ್ಯಾ ಕಪ್‌ನಲ್ಲಿ ಈ ಬಾರಿ ಯಾವುದೇ ಸೆಮಿ-ಫೈನಲ್‌ ಪಂದ್ಯಗಳು ಇರುವುದಿಲ್ಲ. ಹೀಗಾಗಿ ಆಡಿದ 3 ಸೂಪರ್‌ 4 ಪಂದ್ಯಗಳಲ್ಲಿ ಯಾವ 2 ತಂಡಗಳು ಟಾಪ್‌ 1 & 2 ನೇ ಸ್ಥಾನದಲ್ಲಿ ಇರುತ್ತದೆಯೋ ಆ ಎರಡು ತಂಡಗಳು ಫೈನಲ್‌ಗೆ ತಲುಪಲಿದೆ. ಹಾಗಿದ್ದರೆ ಈ ಬಾರಿ ಏಷ್ಯಾ ಕಪ್‌ನ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ಗ್ರೂಪ್ A: ಭಾರತ, ಪಾಕಿಸ್ತಾನ್, ಒಮಾನ್, ಯುಎಇ.

ಗ್ರೂಪ್ B: ಬಾಂಗ್ಲಾದೇಶ್, ಶ್ರೀಲಂಕಾ, ಅಫ್ಘಾನಿಸ್ತಾನ್, ಹಾಂಗ್ ಕಾಂಗ್.

ಏಷ್ಯಾಕಪ್‌ 2025 ಸಂಪೂರ್ಣ ವೇಳಾಪಟ್ಟಿ:

1. ಸೆಪ್ಟೆಂಬರ್ 9, 2025 – ಅಫ್ಘಾನಿಸ್ತಾನ vs ಹಾಂಗ್ ಕಾಂಗ್ (B) – ರಾತ್ರಿ 8:00

2. ಸೆಪ್ಟೆಂಬರ್ 10, 2025 – ಭಾರತ vs ಯುಎಇ (A) – ರಾತ್ರಿ 8:00

3. ಸೆಪ್ಟೆಂಬರ್ 11, 2025 – ಬಾಂಗ್ಲಾದೇಶ vs ಹಾಂಗ್ ಕಾಂಗ್ (B) – ರಾತ್ರಿ 8:00

4. ಸೆಪ್ಟೆಂಬರ್ 12, 2025 – ಪಾಕಿಸ್ತಾನ vs ಓಮನ್ (A)- ರಾತ್ರಿ 8:00

5. ಸೆಪ್ಟೆಂಬರ್ 13, 2025 – ಬಾಂಗ್ಲಾದೇಶ vs ಶ್ರೀಲಂಕಾ (B)- ರಾತ್ರಿ 8:00

6. ಸೆಪ್ಟೆಂಬರ್ 14, 2025 – ಭಾರತ vs ಪಾಕಿಸ್ತಾನ (A)- ರಾತ್ರಿ 8:00

7. ಸೆಪ್ಟೆಂಬರ್ 15, 2025 – ಶ್ರೀಲಂಕಾ vs ಹಾಂಗ್ ಕಾಂಗ್ (B)- ರಾತ್ರಿ 8:00

8. ಸೆಪ್ಟೆಂಬರ್ 15, 2025 – ಓಮನ್ vs ಯುಎಇ (A)- ಸಂಜೆ 5:30

9. ಸೆಪ್ಟೆಂಬರ್ 16, 2025 – ಬಾಂಗ್ಲಾದೇಶ vs ಅಫ್ಘಾನಿಸ್ತಾನ (B)- ರಾತ್ರಿ 8:00

10. ಸೆಪ್ಟೆಂಬರ್ 17, 2025 – ಪಾಕಿಸ್ತಾನ vs ಯುಎಇ (A)- ರಾತ್ರಿ 8:00

11. ಸೆಪ್ಟೆಂಬರ್ 18, 2025 – ಶ್ರೀಲಂಕಾ vs ಅಫ್ಘಾನಿಸ್ತಾನ (B)- ರಾತ್ರಿ 8:00

12. ಸೆಪ್ಟೆಂಬರ್ 19, 2025 – ಭಾರತ vs ಓಮನ್ (A)- ರಾತ್ರಿ 8:00

ಏಷ್ಯಾ ಕಪ್ 2025 ಸೂಪರ್ 4 ವೇಳಾಪಟ್ಟಿ:

1. ಸೆಪ್ಟೆಂಬರ್ 20, 2025 – B1 vs B2 – ರಾತ್ರಿ 8:00

2. ಸೆಪ್ಟೆಂಬರ್ 21, 2025 – A1 vs A 2 – ರಾತ್ರಿ 8:00

3. ಸೆಪ್ಟೆಂಬರ್ 23, 2025 – A2 vs B1 – ರಾತ್ರಿ 8:00

4. ಸೆಪ್ಟೆಂಬರ್ 24, 2025 – A1 vs B2 – ರಾತ್ರಿ 8:00

5. ಸೆಪ್ಟೆಂಬರ್ 25, 2025 – A2 vs B2- ರಾತ್ರಿ 8:00

6. ಸೆಪ್ಟೆಂಬರ್ 26, 2025 – A1 vs B1- ರಾತ್ರಿ 8:00

7. ಸೆಪ್ಟೆಂಬರ್ 28, 2025 – ಫೈನಲ್‌ – ರಾತ್ರಿ 8:00

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video