ಕೋಲಾರ:- ಜಿಲ್ಲೆಯ ಬಂಗಾರಪೇಟೆ ತಾಲೂಕಿನ ರಾಮಾಪುರ ಗ್ರಾಮದ ಮುನಿವೆಂಕಟಪ್ಪ ಎಂಬುವರ ಪುತ್ರ ಮುನಿರಾಜು ತನ್ನ ಒಡಹುಟ್ಟಿದ ಅಣ್ಣ ವೆಂಕಟಾ ಚಲಪತಿಯನ್ನ ಬರ್ಬರವಾಗಿ ಕೊಲೆ ಮಾಡಿದ್ದು ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದ್ದಾನೆ.
ಕಳೆದ ಕೆಲ ತಿಂಗಳುಗಳಲ್ಲಿ ಆಗಾಗ ಅಣ್ಣ ತಮ್ಮ ನಡುವೆ ಆಸ್ತಿ ವಿಚಾರವಾಗಿ ವೈಮನಸ್ಯ ಇತ್ತು. ಪಿತ್ರಾರ್ಜಿತ ಆಸ್ತಿಯನ್ನು ಪಾಲು ಮಾಡಿಕೊಳ್ಳುವ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆಯುತ್ತಲೇ ಇತ್ತು. ಆದರೆ, ಬೆಳ್ಳಂಬೆಳ್ಳಿಗ್ಗೆ ಆರು ಗಂಟೆಯ ಸಮಯದಲ್ಲಿ ತಮ್ಮ ಕುರಿಗಳ ಶೆಡ್ ನಲ್ಲಿ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಏಕಾಏಕಿ ಜಗಳ ವಿಕೋಪಕ್ಕೆ ಹೋಗಿದೆ, ಮುನಿರಾಜು ಒಡಹುಟ್ಟಿದ ಅಣ್ಣನನ್ನು ಕೊಚ್ಚಿದ್ದಾನೆ. ಮುಖ, ತಲೆ ಎಲ್ಲೆಂದರಲ್ಲಿ ಮುಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಮುಗಿಸಿದ್ದಾನೆ.
ರಾಮಾಪುರದ ಮುನಿವೆಂಕಟಪ್ಪರಿಗೆ ನಾಲ್ವರು ಮಕ್ಕಳು, ಅವರಲ್ಲಿ ಹಿರಿಯ ಪುತ್ರ ಕೊಲೆಯಾದ ವೆಂಕಟಾಚಲಪತಿ. ಈ ಆರೋಪಿ ಮುನಿರಾಜು ಎರಡನೇ ಎರಡನೇ ಪುತ್ರ, ಜೊತೆಗೆ ಇಬ್ಬರು ಹೆಣ್ಣು ಮಕ್ಕಳು ಸಹ ಇದ್ದಾರೆ. ಆಸ್ತಿಗಾಗಿ ನಾಲ್ವರಲ್ಲಿ ಇದ್ದ ವ್ಯಾಜ್ಯ ಕೊಲೆವರೆಗೆ ತಲುಪಿದೆ. ಹಿರಿಯ ಪುತ್ರ ಕೊಲೆಯಾದ ವೆಂಕಟಾಚಲಪತಿ ಈಗಾಗಲೇ ಈ ಮುನಿರಾಜುಗೆ ಮುವತ್ತೈದು ಲಕ್ಷ ಹಣವನ್ನ ಸಹ ನೀಡಿದ್ದಾರೆ. ಆದರೆ, ಇದಷ್ಟು ಸಾಲದು. ಆಸ್ತಿಯಲ್ಲಿ ನನಗೆ ಇನ್ನೂಪಾಲು ಬರಬೇಕು ಎಂಬುದು ಆರೋಪಿಯ ವಾದ. ಹಾಗಾಗಿಯೇ ಅಣ್ಣನೊಂದಿಗೆ ಜಗಳಕ್ಕಿಳಿದಿದ್ದ ಮುನಿರಾಜು ಮುಂಜಾನೆಯೇ ಅಣ್ಣನನ್ನು ಕೊಂದುಹಾಕಿದ್ದಾನೆ.
ವೆಂಕಟಚಲಪತಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದವರು. ರಾಜಕೀಯ ಪಕ್ಷವೊಂದರಲ್ಲಿ ಗುರುತಿಸಿಕೊಂಡಿದ್ದು ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರಪರಿಚಿತ ಮತ್ತು ಜನಾನುರಾಗಿಯೂ ಆಗಿದ್ದವರು. ಆದರೆ, ಸ್ವಂತ ಸಹೋದರನ ಆಸ್ತಿ ದಾಹಕ್ಕೆ ಕೊಲೆಯಾಗಿದ್ದಾರೆ.
Leave feedback about this